BIG NEWS: ಬಸ್ ಹಾಗೂ ಆಟೋ ಭೀಕರ ಅಪಘಾತ: 7 ಜನರು ದುರ್ಮರಣ

ಅನಂತಪುರ: ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಆಟೋ ನಡುವೆ ಈ ಅಪಘಾತ ಸಂಭವಿಸಿದೆ. 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಿಮ್ಮಂಪೇಟ ಸಮೀಪ ಬಾಳೆ ತೋಟದಲ್ಲಿ ದಿನಗೂಲಿ ಕೆಲಸ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಗಾರ್ಲದಿನ್ನೆ ಮಂಡಲದ ತಳಗಾಸಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.

ಮೃತರನ್ನು ಡಿ.ನಾಗಮ್ಮ, ರಾಮಾಂಜಿನಮ್ಮ, ಬಾಲಪೆದ್ದಯ್ಯ, ಬಿ.ನಾಗಮ್ಮ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಒಟ್ಟು 13 ಜನರು ಆಟೋದಲ್ಲಿ ತೆರಳುತ್ತಿದ್ದರು. ಎಲ್ಲರೂ ಪುಟ್ಲೂರು ಮಂಡಲದ ಎಲ್ಲುಟ್ಲ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read