ಬಸ್ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ಮೆಟ್ರೋ ದರ ಏರಿಕೆ: ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ‘ದುಬಾರಿ ಗ್ಯಾರಂಟಿ’: ಬಿಜೆಪಿ ಆಕ್ರೋಶ

ಬೆಂಗಳೂರು: ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡಿಸಿ ಈಗ ಜನಸಾಮಾನ್ಯರು ಮುಟ್ಟಿದ್ದಕ್ಕೆಲ್ಲಾ ದರ ಏರಿಕೆ ಮಾಡುತ್ತಿರುವ ಕಾಂಗ್ರೆಸ್ ನ ವಕ್ರದೃಷ್ಟಿ ಈಗ ಮೆಟ್ರೋ ಸಾರಿಗೆ ಮೇಲೆ ಬಿದ್ದಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಆಡಳಿತದಲ್ಲಿ ಮೆಟ್ರೋ ಎನ್ನುವುದು ಕಾಗದಕ್ಕೆ ಸೀಮಿತವಾಗಿತ್ತು. ಬಿಜೆಪಿ ಸರ್ಕಾರದಿಂದ ಬೆಂಗಳೂರಿಗರ ಮೆಟ್ರೋ ಕನಸು ನನಸಾಗಿತ್ತು. ಈಗ ಮೆಟ್ರೋ ಟಿಕೆಟ್ ದರ ಏರಿಸಿ ಜನಸಾಮಾನ್ಯರ ಲೂಟಿ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದೆ.

ಬಸ್ ಟಿಕೆಟ್ ದರದ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಶೇ. 20 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟ ಹಾಗೆ ನಟಿಸಿ, ಮತ್ತೊಂದು ಕೈಯಿಂದ ದುಪ್ಪಟ್ಟು ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read