ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಬಸ್ ಬ್ರೇಕ್ ಫೇಲಾಗಿದ್ದು, ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಇಳಿಜಾರಿನ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್ ನ ಬ್ರೇಕ್ ಫೇಲಾಗಿದೆ. ನಿಯಂತ್ರಣಕ್ಕೆ ಸಿಗದೇ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ. ಮದುವೆ ಮುಗಿಸಿ ಮದ್ದೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿದೆ. ಬಸ್ ನಲ್ಲಿದ್ದ 30 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಮಯಪ್ರಜ್ಞೆಯಿಂದ ಚಾಲಕ ತಡೆಗೋಡೆಗೆ ಬಸ್ ಡಿಕ್ಕಿಹೊಡೆಸಿ ನಿಯಂತ್ರಿಸಿದ್ದಾರೆ ಎನ್ನಲಾಗಿದೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.