ಪಂಚಕುಲ: ಪಂಚಕುಲ ಪೊಲೀಸರು ತಡರಾತ್ರಿ ನಡೆಸಿದ ದಾಳಿಯಲ್ಲಿ ಅಕ್ರಮ ಚಟುವಟಿಕೆಗಳು ಬಯಲಾಗಿವೆ. ಖಾಸಗಿ ಕೆಫೆಯೊಂದಕ್ಕೆ ನುಗ್ಗಿದ ಪೊಲೀಸರಿಗೆ ಅಲ್ಲಿದ್ದ ದೃಶ್ಯ ಕಂಡು ಆಘಾತವಾಗಿದೆ. 12 ಹುಡುಗಿಯರು ಮತ್ತು 48 ಹುಡುಗರು ಸೇರಿದಂತೆ ಒಟ್ಟು 60 ಜನರು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದರು.
ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಈ 60 ಜನರನ್ನು ಜೂಜಾಟದ ಆರೋಪದಡಿ ಬಂಧಿಸಿದ್ದಾರೆ. ಸ್ಥಳದಿಂದ 3.69 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, 20 ಅಕ್ರಮ ಮದ್ಯದ ಬಾಟಲಿಗಳು ಮತ್ತು 21 ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಕ್ರೈಮ್ ಬ್ರಾಂಚ್ ಮತ್ತು ಆಂಟಿ ನಾರ್ಕೋಟಿಕ್ಸ್ ಸೆಲ್ ತಂಡಗಳು ಜಂಟಿಯಾಗಿ ನಡೆಸಿವೆ. ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ತಡರಾತ್ರಿ ಮಾಹಿತಿ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಆಧರಿಸಿ, ಕ್ರೈಮ್ ಬ್ರಾಂಚ್ 26, ಡಿಟೆಕ್ಟಿವ್ ಸ್ಟಾಫ್ ಮತ್ತು ಆಂಟಿ ನಾರ್ಕೋಟಿಕ್ಸ್ ಸೆಲ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದವು.
ಅಕ್ರಮವಾಗಿ ಜೂಜಾಟ ಮತ್ತು ಮದ್ಯವನ್ನು ನೀಡುತ್ತಿದ್ದ ಸ್ಥಳದ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.