ಅಲ್ಪಸಂಖ್ಯಾತರಿಗೆ ಬಂಪರ್ , ಹಿಂದೂಗಳಿಗೆ ಶೂನ್ಯ : ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ವಾರ್

ಬೆಂಗಳೂರು : ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಹಿಂದೂಗಳಿಗೆ ಸರ್ಕಾರ ಶೂನ್ಯ ಕೊಡುಗೆ ನೀಡಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.

ಕಾಂಗ್ರೆಸ್ ಅಧಿಕಾರದಲ್ಲಿದೆ, ಬಹಳ ಅಪಾಯಕಾರಿಯಾಗಿದೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅನ್ವಯ ಇರುವ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ಸಿನ ಪಾರ್ಥೇನಿಯಂ ಬೆಳೆದಿದೆ. ತುಷ್ಟೀಕರಣದ ರಾಜಕಾರಣವನ್ನು ಎಂದಿಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಪ್ಪುತ್ತಿರಲಿಲ್ಲ ಎಂದು ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.

ಏನಿದೆ ಪೋಸ್ಟರ್ ನಲ್ಲಿ..?

ಬಹುಸಂಖ್ಯಾತ ಹಿಂದುಗಳಿಗೆ ಶೂನ್ಯ
ಒಬಿಸಿ, ಎಸ್ಪಿ ನಿಗಮಗಳಿಗೆ ಶೂನ್ಯ
ರಾಜ್ಯದ ಹಿಂದು ದೇವಾಲಯಗಳಿಗೆ ಶೂನ್ಯ
ರಾಜ್ಯದ ರೈತರಿಗೆ ಶೂನ್ಯ
ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕರಿಗೆ ಶೂನ್ಯ

ಅಲ್ಪಸಂಖ್ಯಾತರಿಗೆ ಬಂಪರ್
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಅನುದಾನ
ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆ
ಇನ್ಮುಂದೆ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ
ಪಿಎಫ್ಐ ಕೆಎಫ್ಡಿ ಭಯೋತ್ಪಾದಕ ಸಂಘಟನೆಗಳ ಮೇಲಿನ 175 ಕೇಸ್ ವಾಪಸ್

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಹಿಂದೂಗಳಿಗೆ ಸರ್ಕಾರ ಶೂನ್ಯ ಕೊಡುಗೆ ನೀಡಿದೆ ಪೋಸ್ಟರ್ ಹರಿಬಿಟ್ಟು ಸರ್ಕಾರದ ವಿರುದ್ಧ BJP  ಕಿಡಿಕಾರಿದೆ.

https://twitter.com/BJP4Karnataka/status/1738479237580165165?ref_src=twsrc%5Etfw%7Ctwcamp%5Etweetembed%7Ctwterm%5E1738479237580165165%7Ctwgr%5E5b475f159562e80015dce8e649e8a6f27ba75f9b%7Ctwcon%5Es1_&ref_url=https%3A%2F%2Fvistaranews.com%2Fkarnataka%2Fbengaluru%2Fposter-war-bjp-condemns-congress-for-muslim-appeasement%2F539222.html

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read