ಮಾಜಿ ಈಜುಪಟು ಬುಲಾ ಚೌಧರಿ ಪದ್ಮಶ್ರೀ ಪ್ರಶಸ್ತಿ ಕಳುವು: ಗಳಿಸಿದ್ದೆಲ್ಲವನ್ನೂ ಕಳೆದುಕೊಂಡೆ ಎಂದು ಕಣ್ಣೀರು

ಕೋಲ್ಕತ್ತ: ಮಾಜಿ ಈಜುಪಟು ಬುಲಾ ಚೌಧರಿ ಅವರಿಗೆ ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಗಳುವಾಗಿದೆ. ಈ ಬಗ್ಗೆ ಬುಲಾ ಚೌಧರಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪ್ರಶಸ್ತಿ ಕಳುವಾಗಿದೆ ಎಂದು ಬುಲಾ ಚೌಧರಿ ದೂರು ನೀಡಿದ್ದಾರೆ.

ಬದುಕಿನಲ್ಲಿ ಏನೆಲ್ಲವನ್ನೂ ಗಳಿಸಿದ್ದೆ ಅವೆಲ್ಲವನ್ನೂ ಕಳೆದುಕೊಂಡೆ. ನನ್ನ ಬದುಕಿನಲ್ಲಿ ಅತ್ಯಂತ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಸಂಪಾದಿಸಿದ ಎಲ್ಲವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆರು ಚಿನ್ನದ ಪದಕ ಸೇರಿ, ಎಲ್ಲಾ ಪದಕಗಳನ್ನೂ ನಾನು ಕಳೆದುಕೊಂಡಿದ್ದೇನೆ. ಎಲ್ಲವನ್ನೂ ಹೊತ್ತೊಯ್ದಿರುವ ಕಳ್ಳರು ಅರ್ಜುನ ಪ್ರಶಸ್ತಿ ಹಾಗೂ ತೇನ್ ಸಿಂಗ್ ಪ್ರಶಸ್ತಿಗಳನ್ನು ಬಿಟ್ಟುಹೋಗಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

ಅರ್ಜುನ ಹಾಗೂ ತೇನ್ ಸ್ಂಗ್ ಪ್ರಶಸ್ತಿಗಳು ಒಂದೇ ಗ್ರಾದಲ್ಲಿದ್ದುದರಿಂದ ಕಳ್ಳರು ಅದನ್ನು ಬಿಟ್ಟು ಹೋಗಿರಬಹುದು. ಹಿಂಡ್ ಮೋಟಾರ್ ನಲ್ಲಿರುವ ಮನೆಯಲ್ಲಿ ನಾನು ಎಲ್ಲಾ ಪ್ರಶಸ್ತಿ, ಪದಕಗಳನ್ನು ಇಟ್ತಿರುತ್ತಿದ್ದೆ. ಆಗಾಗ ಆ ಮನೆಗೆ ಭೇಟಿ ನೀಡುತ್ತಿರುತ್ತೇನೆ. ಬೀಗ ಹಾಕಿದ್ದರೂ ಕಳ್ಳತನವಾಗಿದೆ. ಇದು ಮೂರನೇ ಬಾರಿ ಆಗಿರುವ ಕಳ್ಳತನ ಎಂದು ತಿಳಿಸಿದ್ದಾರೆ. ಆಗಸ್ಟ್ 15ರಂದು ನಾನು ಆ ಮನೆಗೆ ಭೇಟಿ ನೀಡಲು ತೆರಳಿದ್ದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೇಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read