BIG NEWS: ಬಿಎಸ್ ಪಿ ಮುಖ್ಯಸ್ಥ ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣ: ಆರೋಪಿ ಪೊಲೀಸ್ ಎನ್ ಕೌಂಟರ್ ಗೆ ಬಲಿ

ಚೆನ್ನೈ: ತಮಿಳುನಾಡು ಬಿಎಸ್ ಪಿ ಮುಖ್ಯಸ್ಥ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.

ತಿರುವೆಂಗಡಂ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಆರೋಪಿ. ಚೆನ್ನೈನ ಮಾಧವರಂ ಬಳಿ ಎನ್ ಕೌಂಟರ್ ಮಾಡಲಾಗಿದ್ದು, ತಿರುವೆಂಗಡಂ ಬಲಿಯಾಗಿದ್ದಾನೆ.

ಆರ್ಮ್ ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲು ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಯಲೆಂದು ಪೊಲೀಸರು ಆರೋಪಿ ತಿರುವೆಂಗಡಂನೊಂದಿಗೆ ಮಾಧವರಂ ಬಳಿಯ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪೊಲೀಸರು ತಿರುವೆಂಗಡಂ ಮೇಲೆ ಗುಂಡಿನ ದಾಳಿ ನಡೆಸಿ ಎನ್ ಕೌಂಟರ್ ಮಾಡಿದ್ದಾರೆ.

ತಿರುವೆಂಗಡಂ, ಆರ್ಮ್ ಸ್ಟ್ರಾಂಗ್ ಅವರ ಕೊಲೆಗೂ ಮುನ್ನ ಹಲವು ದಿನಗಳಿಂದ ಅವರ ಮೇಲೆ ನಿಗಾ ಇಟ್ಟಿದ್ದ. ಅಲ್ಲದೇ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಜುಲೈ 5ರಂದು ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿನ ನಿವಾಸದ ಬಳಿ ಆರು ಅಪರಿಚಿತರ ಗುಂಪು ಆರ್ಮ್ ಸ್ಟ್ರಾಂಗ್ ಅವರ ಮೇಲೆ ಮಾರಣಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read