BSNL ಗ್ರಾಹಕರಿಗೆ ಗುಡ್ ನ್ಯೂಸ್: ಆಧಾರ್ ಸೇರಿ ಇತರೆ ದಾಖಲೆ ತೋರಿಸಿ ಉಚಿತ 4ಜಿ ಸಿಮ್ ಕಾರ್ಡ್ ಪಡೆಯಿರಿ

ದಾವಣಗೆರೆ: ಬಿ.ಎಸ್.ಎನ್.ಎಲ್. ಬಳಕೆದಾರರಿಗೆ ಉಚಿತ 4ಜಿ ಸಿಮ್ ಅಪ್ ಗ್ರೇಡ್‍ ಗಳನ್ನು ನೀಡುತ್ತಿದೆ. ಬಿಎಸ್‍ಎನ್‍ಎಲ್ ಬಳಕೆದಾರರಾಗಿದ್ದಲ್ಲಿ ಈಗಿರುವ 2ಜಿ, 3ಜಿ ಬದಲಿಗೆ ವೇಗದ 4ಜಿ ನೆಟ್‍ವರ್ಕ್ ಅನ್ನು ಪಡೆಯಲು ಬಯಸಿದರೆ ಮೂಲ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಯಾವುದೇ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರ, ಪ್ರಾಂಚೈಸಿ, ಸಿಎಸ್‍ಸಿ ಗಳಲ್ಲಿ ಉಚಿತ 4ಜಿ ಸಿಮ್ ಪಡೆಯಬಹುದಾಗಿದೆ.

ಬಿಎಸ್‍ಎನ್‍ಎಲ್ ಬಳಕೆದಾರರ ಗುರುತಿನ ಪರಿಶೀಲನೆ

ಬಿಎಸ್‍ಎನ್‍ಎಲ್‍ನ ಎಲ್ಲಾ ಗ್ರಾಹಕರು ಈ ಹಿಂದೆ ಕಾಗದದ ಅರ್ಜಿಯನ್ನು ಸಲ್ಲಿಸುವ ಮೂಲಕ ಮೊಬೈಲ್ ಸಿಮ್ ತೆಗೆದುಕೊಂಡ ಬಿಎಸ್‍ಎನ್‍ಎಲ್ ಎಲ್ಲಾ ಗ್ರಾಹಕರನ್ನು ಡಿಜಿಟಲ್ ಮೋಡ್‍ನಲ್ಲಿ ಮರುಪರಿಶೀಲಿಸಿಕೊಳ್ಳಬೇಕು. ಇದು ಅಸ್ತಿತ್ವದಲ್ಲಿರುವ ಬಳಕೆದಾರರ ಗುರುತನ್ನು ದೃಢೀಕರಿಸುವ ಪ್ರಕ್ರಿಯೆಯಾಗಿದೆ.

ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಯಾವುದೇ ಬಿಎಸ್‍ಎನ್‍ಎಲ್ ಗ್ರಾಹಕರ ಸೇವಾ ಕೇಂದ್ರ, ಬಿಎಸ್‍ಎನ್‍ಎಲ್ ಫ್ರಾಂಚೈಸಿ ಮತ್ತು ರಿಟೇಲರ್ ಅಂಗಡಿಯಲ್ಲಿ ಮರುಪರಿಶೀಲಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರು ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮೂಲ ಗುರುತಿನ ಪುರಾವೆಯನ್ನು ಹೊಂದಿರಬೇಕಾಗಿರುತ್ತದೆ.

ಮರುಪರಿಶೀಲನೆಯ ಅಗತ್ಯವಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಗ್ರಾಹಕರು ಏಪ್ರಿಲ್ 30 ರ ಮೊದಲು ಮರುಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಸ್‍ಎನ್‍ಎಲ್ ವ್ಯವಸ್ಥಾಪಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read