ಬಿಎಸ್ಎನ್ಎಲ್ ಹಾಸನ ಸೀಮಿತ ಅವಧಿಯ ಕೊಡುಗೆಯಾಗಿ ಕೇವಲ 1 ರೂ.ಗೆ ಹೊಸ ಫ್ರೀಡಂ ಪ್ಲಾನ್ ಸಿಮ್ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಯೋಜನೆ ಕೇವಲ 30 ದಿನಗಳು ಮಾತ್ರ.
ಯೋಜನೆಯ ವೈಶಿಷ್ಟ್ಯಗಳು: ಅನಿಯಮಿತ ಕರೆಗಳು, ದಿನಕ್ಕೆ 2GB ಡೇಟಾ, ದಿನಕ್ಕೆ 100 SMS. ಈ ಯೋಜನೆ ಹೊಸ ಸಿಮ್ ಮತ್ತು MNP ಪೋರ್ಟ್-ಇನ್ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
ಈ ಕೊಡುಗೆಯನ್ನು ಪಡೆಯಲು ಮತ್ತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು, ಹತ್ತಿರದ BSNL ವಿತರಕರು ಅಥವಾ ಗ್ರಾಹಕ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡುವಂತೆ ಬಿಎಸ್‌ಎನ್‌ಎಲ್ ನ ಉಪ ವ್ಯವಸ್ಥಾಪಕರು ತಿಳಿಸಿದ್ದಾರೆ.