ನಿಶ್ಚಿತಾರ್ಥಕ್ಕೆ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟ ಬಿಎಸ್‌ಎಫ್ ಯೋಧ

ಭೋಪಾಲ್: ಜಬಲ್ಪುರ್ ಕುಗ್ವಾ ಗ್ರಾಮದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧರೊಬ್ಬರು ತನ್ನ ನಿಶ್ಚಿತಾರ್ಥದ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಜವಾನ್ ಅಶ್ವಿನಿ ಕುಮಾರ್ ಪಟೇಲ್ ಅವರು ನಿಶ್ಚಿತಾರ್ಥಕ್ಕೆಂದು ಒಂದು ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದರು. ಫೆಬ್ರವರಿ 15 ರಂದು ಇಡೀ ಕುಟುಂಬ ನಿಶ್ಚಿತಾರ್ಥದ ತಯಾರಿಯಲ್ಲಿ ನಿರತರಾಗಿದ್ದಾಗ ತನ್ನ ತಾಯಿಗೆ ವಾಕಿಂಗ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದರು. ಈ ವರ್ಷ ಏಪ್ರಿಲ್ 22 ರಂದು ಜವಾನ್ ಮದುವೆಯಾಗಬೇಕಿತ್ತು.

ಆದರೆ, ಅವರು ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದಾಗ ರೈಲ್ವೇ ಹಳಿಯ ಬಳಿ ಜವಾನನ ಶವ ಎರಡು ತುಂಡುಗಳಾಗಿ ಪತ್ತೆಯಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಂತಿಮ ಸಂಸ್ಕಾರಕ್ಕೆ ಅಪಾರ ಜನಸ್ತೋಮ ನೆರೆದಿತ್ತು. ಯೋಧನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ರಕ್ಷೆ ನೀಡಲಾಯಿತು. ಘಟನೆಯ ಕಾರಣವನ್ನು ತಿಳಿಯಲು ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read