ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೆಬಲ್ ಗಳು ನಾಪತ್ತೆ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಟೆಕನ್ ಪುರ ಗ್ವಾಲಿಯರ್ ನಲ್ಲಿ ನಿಯೋಜಿಸಲಾಗಿದ್ದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳಾದ ಜಬಲ್‌ಪುರ ಮೂಲದ ಆಕಾಂಕ್ಷಾ ನಿಖರ್ ಹಾಗೂ ಬಂಗಾಳದ ಮುರ್ಷಿದಾಬಾದ್‌ ಮೂಲದ ಶಹಾನಾ ಖಾತೂನ್ ಏಕಏಕಿ ನಾಪತ್ತೆಯಾಗಿದ್ದಾರೆ. ಜೂನ್ 6ರಂದು ನಾಪತ್ತೆಯಾಗಿರುವ ಇಬ್ಬರಿಗಾಗಿ ಹುಡುಕಾಟ ತೀವ್ರಗೊಂಡಿದೆ.

ಬಿಎಸ್ ಎಫ್ ಮಹಿಳಾ ಸಿಬ್ಬಂದಿ ನಾಪತ್ತೆ ಪ್ರಕರಣದ ತನಿಖೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳ ಕೊಠಡಿಯಲ್ಲಿ ಫೋನ್ ಗಳು ಪತ್ತೆಯಾಗಿವೆ. ಮೂಲಗಳ ಪ್ರಕಾರ, ಅಧಿಕಾರಿಗಳ ತನಿಖೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ ಕಾನ್‌ಸ್ಟೆಬಲ್‌ಗಳ ಫೋನ್‌ಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಪತ್ತೆಯಾಗಿವೆ.

ಬಿಎಸ್ ಎಫ್ ನಿಂದ ಮಾಹಿತಿ ಪಡೆದು ಗ್ವಾಲಿಯರ್ ನ ಬಿಲುವಾ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ನಾಪತ್ತೆಯಾಗಿರುವ ಮಹಿಳಾ ಕಾನ್ಸ್ ಟೇಬಲ್ ಗಳ ಓಡಾಟ ಸೆರೆಯಾಗಿದೆ. ಗ್ವಾಲಿಯರ್ ನಿಂದ ದೆಹಲಿಯತ್ತ ರೈಲಿನಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ದೆಹಲಿಯಲ್ಲಿ ಎಟಿಎಂ ನಿಂದ ಹಣ ಡ್ರಾ ಮಾಡಿ ಕೋಲ್ಕತ್ತಾಗೆ ತೆರಳಿದ್ದು, ಕೋಲ್ಕತ್ತಾದಿಂದ ಓರ್ವ ಮಹಿಳೆ ಮುಷಿದಾಬಾದ್ ತಲುಪಿದ್ದಾರೆ ಎಂದು ಈವರೆಗಿನ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.

ಇಬ್ಬರು 2021ರಿಂದ ಬಿಎಸ್ ಎಫ್ ಅಕಾಡೆಮಿಯಲ್ಲಿ ಸಹಾಯಕ ತರಬೇತಿ ಕೇಂದ್ರದಲ್ಲಿ ತರಬೇತುದಾರ ಹುದ್ದೆ ಹೊಂದಿದ್ದರು. ಪ್ರಕರಣ ಸಂಬಂಧ ಎಸ್ ಐಟಿ ಹಾಗೂ ಬಿಎಸ್ ಎಫ್ ಗುಪ್ತಚರ ಘಟಕ ತನಿಖೆ ನಡೆಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read