ಅಹಮದಾಬಾದ್: ಗುಜರಾತ್ ನ ಕಚ್ ಕರಾವಳಿ ಪ್ರದೇಶದಲ್ಲಿ ಅಪರಿಚಿತ ಬೋಟ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ( ಬಿಎಸ್ ಎಫ್) 15 ಜನ ಪಾಕ್ ಮೀನುಗಾರರನ್ನು ಬಂಧಿಸಿದೆ.
ಅಪರಿಚಿತ ಬೋಟ್ ಪತ್ತೆ ಪ್ರಕರಣ ಸಂಬಂಧ ಶೋಧ ಕಾರ್ಯಾಚರಣೆ ನಡೆಸಿದ ಬಿಎಸ್ ಎಫ್ 15 ಪಾಕ್ ಮೀನುಗಾರರನ್ನು ಬಂಧಿಸಿದೆ.
ಬಂಧಿತರನ್ನು ಪಾಕಿಸ್ತಾನದ ಸಿಂಧಿ ಪ್ರಾಂತ್ಯದ ಸುಜಾವಲ್ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ದೋಣಿಯಲ್ಲಿ 60 ಕೆಜಿ ಮೀನು, 9 ಮೀನು ಹಿಡಿಯುವ ಬಲೆ, ಐಸ್ ಗಡ್ಡೆ, ಆಹಾರ, ಮರದ ತುಂಡು, 200 ಪಕಿಸ್ತಾನ ಕರೆನ್ಸಿ ಮತ್ತು ಮೊಬೈಲ್ ಫೋನ್ ನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.