ಅಕ್ರಮ ಸಂಬಂಧದ ಅನುಮಾನ ; ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಯುವಕನಿಗೆ ಥಳಿತ | Shocking Video

ಬಿಹಾರದ ಸಹರ್ಸಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 24 ವರ್ಷದ ಯುವಕನೊಬ್ಬನನ್ನು ತನ್ನ ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸಿ, ಭೀಕರವಾಗಿ ಥಳಿಸಲಾಗಿದೆ. ಮಿಥಿಲೇಶ್ ಕುಮಾರ್ ಮುಖ್ಯ ಎಂಬ ಈ ಯುವಕ, ತನ್ನ ಚಿಕ್ಕಪ್ಪ ಶಿವಚಂದ್ರ ಮುಖ್ಯ ಅವರ ಪತ್ನಿ ರೀತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪವಿತ್ತು. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎನ್‌ಡಿಟಿವಿ ವರದಿಯ ಪ್ರಕಾರ, ಮಿಥಿಲೇಶ್‌ನನ್ನು ಅಪಹರಿಸಿ ಭೀಂಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜೀವಛಾಪುರ್‌ ಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಕರೆದೊಯ್ಯಲಾಗಿದೆ. ರೀತಾ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಮೇಲೆ, 24 ವರ್ಷದ ಈ ಯುವಕನನ್ನು ಇಬ್ಬರಿಂದ ಮೂವರು ವ್ಯಕ್ತಿಗಳು ದೊಣ್ಣೆಗಳಿಂದ ಥಳಿಸಿದ್ದಾರೆ.

ಶಿವಚಂದ್ರ ಮತ್ತು ರೀತಾ ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂಬುದು ಗಮನಾರ್ಹ. ವೈರಲ್ ಆಗಿರುವ ವಿಡಿಯೋದಲ್ಲಿ, ಮಿಥಿಲೇಶ್‌ಗೆ ರೀತಾ ಹಣೆಗೆ ಸಿಂಧೂರ ಹಚ್ಚುವಂತೆ ಬಲವಂತಪಡಿಸಿರುವುದು ಕಾಣಿಸುತ್ತದೆ.

ಮಿಥಿಲೇಶನ ತಂದೆ, ರಾಮಚಂದ್ರ, ಪೊಲೀಸರಿಗೆ ದೂರು ನೀಡಿದ್ದು, ರೀತಾ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಗುಂಪೊಂದು ತಮ್ಮ ಮಗನಿಗೆ ಥಳಿಸಿದೆ ಎಂದು ಆರೋಪಿಸಿದ್ದಾರೆ. ತಾನು ಮತ್ತು ತನ್ನ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರಿಗೂ ಥಳಿಸಲಾಗಿದೆ ಎಂದು ರಾಮಚಂದ್ರ ಆರೋಪಿಸಿದ್ದಾರೆ. ಮಿಥಿಲೇಶ್ ಬೆನ್ನು, ಕತ್ತು ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 24 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ತಮ್ಮ ದೂರಿನಲ್ಲಿ, ರಾಜಾ ಕುಮಾರ್, ವಿಕಾಸ್ ಮುಖ್ಯ, ಶಿವಚಂದ್ರ ಮುಖ್ಯ, ಸೂರಜ್ ಮುಖ್ಯ, ಪ್ರದೀಪ್ ಠಾಕೂರ್, ಸುರೇಶ್ ಮುಖ್ಯ, ರಾಹುಲ್ ಕುಮಾರ್ ಮತ್ತು ಸಜನ್ ಸಾಹ್ನಿ ತಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಾಮಚಂದ್ರ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕುಮಾರ್ ಮತ್ತು ಸಾಹ್ನಿ ಬೆಲಗಂಜ್ ನಿವಾಸಿಗಳಾಗಿದ್ದು, ಉಳಿದ ಆರೋಪಿಗಳು ಜೀವಛಾಪುರ್ ಗ್ರಾಮದವರಾಗಿದ್ದಾರೆ. ರಾಮಚಂದ್ರ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅತ್ತ, ಮಿಥಿಲೇಶ್ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ವರದಿಯಾಗಿದೆ. 24 ವರ್ಷದ ಈ ಯುವಕನನ್ನು ಆರಂಭದಲ್ಲಿ ನರ್ಪತ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ನಂತರ ಅರಾರಿಯಾ ಸದರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read