ಅಹಮದಾಬಾದ್: 15 ವರ್ಷದ ಅಪ್ರಾಪ್ತನೊಬ್ಬ ತನ್ನ ಅಣ್ಣನನ್ನು ಹತ್ಯೆಗೈದು ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ಜುನಾಗಢದಲ್ಲಿ ನಡೆದಿದೆ.
ಆರೋಪಿ ಬಾಲಕ ತನ್ನ ಅಣ್ಣನ ಜೊತೆ ಜಗಳ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಅಣ್ಣನನ್ನು ರಾಡ್ ನಿಂದ ಹೊಡೆದು ಕೊಲೆಗೈದಿದ್ದು, ಬಳಿಕ ಗರ್ಭಿಣಿ ಅತ್ತಿಗೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ಬಳಿಕ ಮಹಿಳೆಯ ಹೊಟ್ಟೆಯ ಭಾಗಕ್ಕೆ ಮೊಣಕಾಲು ಊರು ಕತ್ತು ಹಿಸುಕಿ ಕೊಲೆಗೈದಿದ್ದಾನೆ.
ಎರಡೂ ಶವಗಳನ್ನು ಮನೆಯ ಹಿಂಭಾಗಕ್ಕೆ ಎಳೆದೊಯ್ದು ಗುಂಡಿ ತೋಡಿ ಮುಚ್ಚಿ ಹಾಕಿದ್ದಾನೆ. ಮನೆಯಲ್ಲಿ ರಕ್ತದ ಕಲೆಗಳನ್ನು ಒರೆಸಿ ಎಸ್ಕೇಪ್ ಆಗಿದ್ದಾನೆ. ಕೃತ್ಯದ ಬಳಿಕ ಬಾಲಕನ ತಾಯಿಯೇ ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದ್ದಾಳೆ.
ಅತ್ತಿಗೆಯ ಪೋಷಕರು ಮಗಳಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಂಡು ದೂರು ನೀಡಿದ್ದರು. ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
