ಮಂಗಳೂರು: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಣ್ಣ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ನಿಡ್ಡೋಡಿ ಮುದ್ದಾಲುಗುತ್ತುವಿನಲ್ಲಿ ನಡೆದಿದೆ.
ಪ್ರವೀಣ್ ಶೆಟ್ಟಿ(49) ಶನಿವಾರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಅವರನ್ನು ನೋಡಲು ಅಣ್ಣ ಸಾಯಿಪ್ರಸಾದ್(52) ಗುಜರಾತ್ ನಿಂದ ಬಂದಿದ್ದರು.
ಸಹೋದರ ಪ್ರವೀಣ್ ಶೆಟ್ಟಿ ಮೃತದೇಹ ನೋಡಿದ ಸಾಯಿಪ್ರಸಾದ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾಯಿಪ್ರಸಾದ್ ಮೃತಪಟ್ಟಿದ್ದಾರೆ.