ಉತ್ತಮ ಆರೋಗ್ಯಕ್ಕೆ ಬ್ರೊಕೊಲಿ ಜ್ಯೂಸ್‌; ಇದು ಯಾವ್ಯಾವ ರೋಗಕ್ಕೆ ಮದ್ದು ಗೊತ್ತಾ….?

ಬ್ರೊಕೋಲಿ ದುಬಾರಿ ತರಕಾರಿಗಳಲ್ಲೊಂದು. ತಿನ್ನಲು ರುಚಿಯಾಗಿರುತ್ತದೆ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಬ್ರೊಕೋಲಿ ಜ್ಯೂಸ್ ಕೂಡ ನಿಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಈ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಜೀರ್ಣಾಂಗ ವ್ಯವಸ್ಥೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಬ್ರೊಕೊಲಿಯಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದಲ್ಲದೆ, ಫೈಬರ್ ಮತ್ತು ವಿಟಮಿನ್-ಸಿ ಸಹ ಹೇರಳವಾಗಿ ಕಂಡುಬರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಬಹಳ ಮುಖ್ಯ. ನಿಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇದೆ. ಒಳ್ಳೆಯದು ಮತ್ತು  ಕೆಟ್ಟದ್ದು.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಬ್ರೊಕೊಲಿ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿ ಇಡಬಹುದು. ಅಧಿಕ ಬಿಪಿ ಸಮಸ್ಯೆ ಇರುವವರು ಮತ್ತು ಹೃದ್ರೋಗಿಗಳಿಗೂ ಇದು ತುಂಬಾ ಪ್ರಯೋಜನಕಾರಿ.

ಈ ಜ್ಯೂಸ್ ನಿಂದ ಬಿಪಿ ನಿಯಂತ್ರಣದಲ್ಲಿರುವುದರ ಜೊತೆಗೆ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಬ್ರೊಕೊಲಿ ಜ್ಯೂಸ್ ನಲ್ಲಿ ಆಂಟಿಒಕ್ಸಿಡೆಂಟ್ ಗಳಿವೆ. ಫೈಬರ್ ಅಂಶ ಕೂಡ ಸಮೃದ್ಧವಾಗಿದೆ. ಹಾಗಾಗಿ ನಿಯಮಿತವಾಗಿ ಬ್ರೊಕೊಲಿ ಜ್ಯೂಸ್‌ ಸೇವನೆ ಮಾಡಿದ್ರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಜ್ಯೂಸ್‌ ಕುಡಿಯೋದ್ರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿಡಲು ಸಹ ಸಹಕಾರಿಯಾಗಿದೆ. ಬ್ರೊಕೊಲಿ ಜ್ಯೂಸ್ ಮೂಳೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್-ಕೆ ಹೇರಳವಾಗಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read