180 ಮಕ್ಕಳ ತಂದೆ…… 200 ಮಹಿಳೆಯರ ಜೊತೆ ಸಂಬಂಧ……. ಆದ್ರೂ ಒಂಟಿ ಈ ವ್ಯಕ್ತಿ….!

ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಣೆ ಮಾಡಲಾಗಿದೆ. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ, ಅವರ ಜೊತೆ ಸಮಯ ಕಳೆದು ಜನರು ವ್ಯಾಲಂಟೈನ್ಸ್‌ ಡೇ ಆಚರಿಸಿದ್ದಾರೆ. ಆದ್ರೆ 180 ಮಕ್ಕಳನ್ನು ಹೊಂದಿರುವ ಈ ವ್ಯಕ್ತಿ ಮಾತ್ರ ಪ್ರೇಮಿಗಳ ದಿನದಂದು ಏಕಾಂಗಿಯಾಗಿದ್ದಾನೆ. ಇಷ್ಟೆಲ್ಲ ಮಕ್ಕಳಿದ್ರೂ ಈತನಿಗೆ ನಿಜವಾಗಿ ಪ್ರೀತಿ ಮಾಡುವ ಸಂಗಾತಿ ಸಿಕ್ಕಿಲ್ಲವಂತೆ. ಅಷ್ಟಕ್ಕೂ ಆತ ಯಾರು ಗೊತ್ತಾ ?

ಸಿಂಗಲ್ ಜೋ ಎಂದೇ ಖ್ಯಾತರಾಗಿರುವ 52 ವರ್ಷದ ಜೋ, ಪ್ರೇಮಿಗಳ ದಿನವನ್ನು ಒಂಟಿಯಾಗಿ ಕಳೆದಿದ್ದಾನೆ. ಜೋ ಒಬ್ಬ ವೀರ್ಯ ದಾನಿ. ಮಕ್ಕಳಿಲ್ಲದ ದಂಪತಿಗೆ ವೀರ್ಯ ದಾನ ಮಾಡುತ್ತಾನೆ. ವೀರ್ಯವನ್ನು ಬ್ರಿಟನ್ ಮಾತ್ರವಲ್ಲದೆ ಅಮೆರಿಕ, ಅರ್ಜೆಂಟೀನಾ, ಫಿಲಿಪೈನ್ಸ್, ಇಟಲಿಯಂತಹ ದೇಶಗಳ ದಂಪತಿ ಬಳಸಿದ್ದಾರೆ. ಇಷ್ಟೇ ಅಲ್ಲ ಅನೇಕ ಮಹಿಳೆಯರ ಜೊತೆ ಸಂಬಂಧ ಬೆಳೆಸಿ ಅವರು ಗರ್ಭ ಧರಿಸಲು ಕಾರಣವಾಗಿದ್ದಾನೆ. ಇದೆಲ್ಲವು ದಂಪತಿ ಒಪ್ಪಿಗೆ ಮೇಲೆ ನಡೆಯುತ್ತದೆ. ಕಳೆದ 14 ವರ್ಷಗಳಿಂದ ವೀರ್ಯ ದಾನಿಯಾಗಿರುವ ಈತ 200 ಮಹಿಳೆಯರ ಜೊತೆ ಸಂಬಂಧ ಬೆಳೆಸಿದ್ದಾನೆ. 180 ಮಕ್ಕಳಿಗೆ ತಂದೆ ಆಗಿದ್ದಾನೆ.

ಇಷ್ಟೆಲ್ಲ ಮಹಿಳೆಯರ ಸಂಪರ್ಕಕ್ಕೆ ಬಂದರೂ ಆತ ಅದನ್ನು ವೃತ್ತಿಯಾಗಿ ನೋಡಿದ್ದಾನೆ. ಮಹಿಳೆಯರು ಕೂಡ ಮಕ್ಕಳನ್ನು ಪಡೆಯುವ ಉದ್ದೇಶಕ್ಕೆ ಮಾತ್ರ ಆತನ ಜೊತೆ ಸಂಬಂಧ ಬೆಳೆಸಿದ್ದಾರೆ. ಇದೇ ಕಾರಣಕ್ಕೆ ನಾನಿನ್ನು ಒಂಟಿ. ಪ್ರೀತಿಸಿ ಮದುವೆಯಾಗಲು ಬಯಸಿದ್ದೇನೆ. ನನ್ನಿಷ್ಟದ ಸಂಗಾತಿ ನನಗೆ ಸಿಗ್ತಿಲ್ಲ ಎಂದು ಜೋ ಹೇಳಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read