ಮದುವೆಗೂ ಮುನ್ನ ಬಂತು ವಧುವಿನ ಅಶ್ಲೀಲ ವಿಡಿಯೋ; ವಿವಾಹ ರದ್ದುಗೊಳಿಸಿದ ವರ….!

ಮದುವೆಗೂ ಮುನ್ನ ವರನ ಕುಟುಂಬಕ್ಕೆ ವಧುವಿನ ಅಶ್ಲೀಲ ವಿಡಿಯೋವನ್ನು ಆಕೆಯ ಮಾಜಿ ಪ್ರಿಯಕರನೆಂದು ಹೇಳಲಾದ ವ್ಯಕ್ತಿ ಕಳುಹಿಸಿದ್ದು, ಇದರಿಂದಾಗಿ ನಿಗದಿಯಾಗಿದ್ದ ವಿವಾಹವೇ ರದ್ದಾಗಿದೆ. ಇಂತಹ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಈ ವಿಡಿಯೋದಲ್ಲಿ ವಧು ಸಮ್ಮತಿಯ ಲೈಂಗಿಕತೆಯಲ್ಲಿ ತೊಡಗಿರುವ ದೃಶ್ಯಾವಳಿಗಳು ಇದ್ದವೆಂದು ಹೇಳಲಾಗಿದ್ದು, ಇದರಿಂದಾಗಿ ವರ, ಮತ್ತಾತನ ತಂದೆ ಮದುವೆ ಮುರಿದುಕೊಂಡಿದ್ದಾರೆ.

ನವೆಂಬರ್ 10 ರಂದು ರಾಜಸ್ಥಾನದ ಸಿಕಾರ್‌ನಲ್ಲಿ ಈ ಮದುವೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ವೀಡಿಯೊವನ್ನು ಸ್ವೀಕರಿಸಿದ ನಂತರ, ವರನ ಕುಟುಂಬ ಮುಂದಿನ ಕಾರ್ಯ ಮುಂದುವರಿಸದಿರಲು ನಿರ್ಧರಿಸಿತ್ತಲ್ಲದೇ ಈ ಕುರಿತು ವಧುವಿನ ಕುಟುಂಬಕ್ಕೂ ಮಾಹಿತಿ ನೀಡಿದೆ.

ಬಳಿಕ ವಧುವಿನ ಕುಟುಂಬ ಈ ಕುರಿತು ಆಕೆಯನ್ನು ಪ್ರಶ್ನಿಸಿದಾಗ, ತನ್ನನ್ನು ಕಾಲೇಜಿನಲ್ಲಿ ಭೇಟಿಯಾದ ವ್ಯಕ್ತಿ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದಿದ್ದಾಳೆ.

ವಧು, ತಾನು ಸೂರತ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಭೇಟಿಯಾಗಿದ್ದ ಜೀಶನ್‌ ಎಂಬ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಅದನ್ನು ಚಿತ್ರೀಕರಿಸಿದ್ದ ಎಂದು ಹೇಳಿದ್ದಾಳೆ.

ಯುವತಿಯ ಮದುವೆ ಬೇರೆಯವರೊಂದಿಗೆ ನಿಶ್ಚಯಿಸಿದಾಗ ಜೀಶನ್ ಕೋಪಗೊಂಡಿದ್ದ ಮತ್ತು ಅ ವೀಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಈ ಮೂಲಕ ನಿಗದಿಯಾಗಿದ್ದ ಮದುವೆ ಮುರಿಯಲು ನಿರ್ಧರಿಸಿದ್ದ ಎನ್ನಲಾಗಿದ್ದು, ಇದೀಗ ಚುರು ಪೊಲೀಸರು ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಸೂರತ್‌ಗೆ ವರ್ಗಾಯಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read