ಮದುವೆ ಮಂಟಪದಲ್ಲೇ ವಧು – ವರನ ಬಿಗ್ ಫೈಟ್; ವೈರಲ್ ವಿಡಿಯೋಗೆ ಬೆಚ್ಚಿಬಿದ್ದ ನೆಟ್ಚಿಗರು…!

ಮದುವೆಯಲ್ಲಿ ವಧು-ವರರ ನಡುವೆ ಪರಸ್ಪರ ತಮಾಷೆ, ಕಾಲೆಯುಳುವುದು ಇರುತ್ತದೆ. ಅದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.

ಇತ್ತೀಚಿಗೆ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಜನ ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಅದರಲ್ಲಿ ನವಜೋಡಿಯ ಭೀಕರ ಕಾಳಗ ಕಂಡುಬಂದಿದೆ.

ವೀಡಿಯೊದಲ್ಲಿ ವಧು ಮೊದಲು ವರನಿಗೆ ತಿನ್ನಿಸುವ ಬದಲು ಅವನ ಬಾಯಿಯಲ್ಲಿ ಸಿಹಿತಿಂಡಿಗಳನ್ನು ತುರುಕುವ ಮೂಲಕ ಅನುಚಿತವಾಗಿ ವರ್ತಿಸಲು ಪ್ರಯತ್ನಿಸುತ್ತಾಳೆ. ಇದರಿಂದ ವರ ಕೋಪಗೊಂಡು ವಧುವಿನ ಮುಖದ ಮೇಲೆ ಹೊಡೆಯುತ್ತಾನೆ.

ನಂತರ ಇಬ್ಬರ ನಡುವೆ ಜಗಳ ಪ್ರಾರಂಭವಾಗುತ್ತದೆ. ಇಬ್ಬರೂ ತುಂಬಾ ಕೆಟ್ಟದಾಗಿ ಜಗಳವಾಡಲು ಪ್ರಾರಂಭಿಸುತ್ತಾರೆ. ಈ ವಿಡಿಯೋಗೆ ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು “ಸಂಬಂಧಿತರು ಯಾರೂ ಅವರನ್ನು ತಡೆಯಲು ಮುಂದೆ ಬರದ ಕಾರಣ ಸ್ಕ್ರಿಪ್ಟ್ ಮಾಡಿದ ವೀಡಿಯೊದಂತೆ ತೋರುತ್ತಿದೆ.” ಎಂದಿದ್ದಾರೆ. ಹಲವರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read