Video; ಫೋಟೋ ಶೂಟಿಂಗ್ ವೇಳೆ ಫೈರ್ ಗನ್ ಹಿಡಿದು ವಧುವಿನ ಪೋಸ್; ಮುಂದೆ ಆಗಿದ್ದು ದೊಡ್ಡ ಎಡವಟ್ಟು

ವಿವಾಹದ ಸಂದರ್ಭದಲ್ಲಿ ನವಜೋಡಿಯ ಚಿತ್ರ ವಿಚಿತ್ರ ಮತ್ತು ವಿಶೇಷ ಫೋಟೋಶೂಟ್ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿದೆ. ಮದುವೆಯ ಸಂದರ್ಭವನ್ನ ವಿಶೇಷವನ್ನಾಗಿಸಲು ವಿಭಿನ್ನವಾಗಿ ಪೋಸ್ ನೀಡುತ್ತಾರೆ. ಕೆಲವೊಮ್ಮೆ ಅಪಾಯ ಸಂಭವಿಸಬಹುದಾದ ಸ್ಟಂಟ್ ಗಳನ್ನು ಸಹ ಪ್ರದರ್ಶಿಸುತ್ತಾರೆ. ಇಂತಹ ಹಲವು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ತಿರುತ್ತವೆ. ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನವಜೋಡಿ ಸ್ಟಂಟ್ ಪ್ರದರ್ಶನ ವೇಳೆ ಅವಘಡ ಉಂಟಾಗಿದ್ದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಹಾರ ಬದಲಾಯಿಸಿಕೊಂಡ ನಂತರ ಹುಡುಗ ಮತ್ತು ಹುಡುಗಿ ವೇದಿಕೆಯ ಮೇಲೆ ನಿಂತಿರುತ್ತಾರೆ. ಅವರಿಬ್ಬರ ಕೈಯಲ್ಲಿ ಫೈರ್ ಗನ್ ಇರುತ್ತದೆ.
ಇಬ್ಬರೂ ಉತ್ತಮ ಭಂಗಿಯಲ್ಲಿ ನಿಂತು ಫೈರ್‌ಗನ್ ಹಾರಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ವರನಿಗೆ ಏನೂ ಆಗುವುದಿಲ್ಲ ಆದರೆ ವಧುವಿನ ಫೈರ್ ಗನ್ ನಿಂದ ಬೆಂಕಿ ಹಿಂಬದಿಯಲ್ಲಿ ಕಾಣಿಸಿಕೊಂಡ ಕಾರಣ ಆಕೆಯ ಮಾಲೆಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದಾಗಿ ವಧುವಿನ ಬಟ್ಟೆ ಮತ್ತು ಹಾರಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ತಕ್ಷಣ ಇದರಿಂದ ಭಯಗೊಂಡ ವಧು ಅಲ್ಲಿಂದ ಗಾಬರಿಯಲ್ಲಿ ಹೊರಟು ಹೋಗುತ್ತಾಳೆ, ನೆರೆದಿದ್ದವರೆಲ್ಲಾ ವಧುವನ್ನು ರಕ್ಷಿಸಲು ಮುಂದಾಗುತ್ತಾರೆ.

ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇಂತಹ ಪ್ರದರ್ಶನದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read