ಮದುವೆ ಔತಣಕೂಟಕ್ಕೆ ಬಂದ ಆನೆಗಳ ಹಿಂಡು; ಬೈಕ್ ಏರಿ ವರ – ವಧು ಪರಾರಿ

ಇನ್ನೇನು ಮದುವೆಯಾಗಿ ಹೊಸ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಮದುವೆ ಸಂಭ್ರಮಾಚರಣೆಯಲ್ಲಿ ಖುಷಿಯಾಗಿದ್ದ ನವಜೋಡಿ ರಾತ್ರೋ ರಾತ್ರಿ ಬೈಕ್ ಏರಿ ಓಡಿಹೋಗಿದ್ದಾರೆ. ರಾತ್ರೋರಾತ್ರಿ ಅವರು ಬೈಕ್ ಏರಿ ಹೆದರಿಹೋಗಲು ಕಾರಣವಾಗಿದ್ದು ಆನೆಗಳ ಹಿಂಡು.

ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನಲ್ಲಿ ನಡೆದ ಮದುವೆಯ ಔತಣ ಕೂಟಕ್ಕೆ ಇದ್ದಕ್ಕಿದ್ದಂತೆ ಆನೆಗಳ ಹಿಂಡು ಬರ್ತಿದ್ದಂತೆ ಮದುವೆ ಸಮಾರಂಭವೆಲ್ಲಾ ಅಸ್ತವ್ಯಸ್ತವಾಗಿ ಹೋಯ್ತು. ಆನೆಗಳನ್ನ ನೋಡಿ ಹೆದರಿದ ವಧು ಮತ್ತು ವರ ಬೈಕ್ ಏರಿ ಸ್ಥಳದಿಂದ ಪರಾರಿಯಾದ್ರು.

ವರದಿಯ ಪ್ರಕಾರ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಮದುವೆಗೆ ಬಂದ ಅತಿಥಿಗಳೆಗೆಂದು ಭರ್ಜರಿ ಊಟದ ವ್ಯವಸ್ಥೆ ಆಗಿತ್ತು. ಇನ್ನೇನು ಎಲ್ಲರಿಗೂ ಊಟ ಬಡಿಸಬೇಕೆನ್ನುವಷ್ಟರಲ್ಲಿ ಆಹಾರದ ವಾಸನೆಗೆ ಆನೆಗಳ ಹಿಂಡು ಮದುವೆ ಸಮಾರಂಭ ನಡೆಯುತ್ತಿದ್ದ ಜಾಗಕ್ಕೆ ಬಂದಿತ್ತು. ಭೋಜನ ವ್ಯವಸ್ಥೆಗೆಂದು ಹಾಕಿದ್ದ ಟೆಂಟ್ ನೊಳಗೆ ಆನೆಗಳು ನುಗ್ಗಿದವು. ಇದನ್ನು ಕಂಡ ನೆಂಟರು ಕಕ್ಕಾಬಿಕ್ಕಿಯಾದ್ರೆ ಜಾರ್ಗ್ರಾಮ್‌ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುವ ವರನು ತನ್ನ ನವವಿವಾಹಿತ ಹೆಂಡತಿಯೊಂದಿಗೆ ಬೈಕ್‌ನಲ್ಲಿ ಮದುವೆ ಸ್ಥಳದಿಂದ ಪಲಾಯನ ಮಾಡಬೇಕಾಯಿತು. ಜಾರ್‌ಗ್ರಾಮ್‌ನ ಜೊವಾಲ್‌ಭಾಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಮನಾರ್ಹ ವಿಷಯವೆಂದರೆ ಮದುವೆಗೆ ದಿನಾಂಕ ನಿಗದಿಪಡಿಸಿದ ಹಲವಾರು ಜೋಡಿಗಳು ಆನೆಗಳ ಭಯದಿಂದ ಮದುವೆ ಮುಂದೂಡುತ್ತಿದ್ದಾರೆ. ಆನೆಗಳ ಓಡಾಟವಿರುವ ಗ್ರಾಮಗಳಲ್ಲಿ ಮದುವೆಗೆ ಬರಲು ಸ್ನೇಹಿತರು ಮತ್ತು ಸಂಬಂಧಿಕರು ನಿರಾಕರಿಸುತ್ತಿರುವುದರಿಂದ ಕೆಲವರು ಮದುವೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಜಾರ್‌ಗ್ರಾಮ್‌ ನ ವಿವಿಧ ಅರಣ್ಯ ಪ್ರದೇಶಗಳಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಂಚರಿಸುತ್ತಿದ್ದು ಇದರಿಂದ ಜೊವಾಲ್‌ಬಂಗಾ, ಕಾಜ್ಲಾ, ಕುಸುಮ್‌ಗ್ರಾಮ್, ಝೋಬಾನಿ, ಆದಿಶೋಲ್ ಮತ್ತು ಕೊಲಬಾನಿ ಮುಂತಾದ ಹಳ್ಳಿಗಳ ನಿವಾಸಿಗಳು ಭಯಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read