ʼಯೋಗಾಭ್ಯಾಸʼದಿಂದ ಉಸಿರಾಟ ಸಮಸ್ಯೆಗೆ ಸಿಗುತ್ತೆ ಪರಿಹಾರ

ಅಸ್ತಮಾ ಸಮಸ್ಯೆಯಿಂದ ಬಳಲುವವರು ಎಷ್ಟು ಎಚ್ಚರವಿದ್ದರೂ ಸಾಲದು, ಸ್ವಲ್ವ ಚಳಿ ಬಿದ್ದರೆ ಸಾಕು ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ನಿತ್ಯ ಕೆಲವು ಯೋಗಾಭ್ಯಾಸಗಳನ್ನು ಮಾಡುವುದರಿಂದ ಈ ಸಮಸ್ಯೆಯಿಂದ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳಬಹುದು.

ಪ್ರಾಣಾಯಾಮಕ್ಕೆ ಸಂಬಂಧಿಸಿದ ಬಸ್ತಿಕವನ್ನು ಅಭ್ಯಾಸ ಮಾಡುವುದರಿಂದ ಉಸಿರಾಟಕ್ಕೆ ಗಾಳಿ ಒಳಗೆ ತೆಗೆದುಕೊಳ್ಳುವಾಗ ಮತ್ತು ಹೊರ ಬಿಡುವಾಗ ಹೆಚ್ಚಿನ ಗಾಳಿ ಒಳಹೋಗಿ ಹೊರಬರುತ್ತದೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಲಭ್ಯವಾಗುತ್ತದೆ.

ಶ್ವಾಸಕೋಶಗಳನ್ನು ಬಲಪಡಿಸುವ ಈ ಯೋಗಾಸನಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅನುಲೋಮ ವಿಲೋಮ ಪ್ರಾಣಾಯಾಮವು ಖಿನ್ನತೆ ಮತ್ತು ಮಾನಸಿಕ ಒತ್ತಡದಂತ ಸಮಸ್ಯೆಗೂ ಪರಿಹಾರ ನೀಡುತ್ತವೆ.

ನಾಡಿಶೋಧನ ಪ್ರಾಣಾಯಾಮವು ಉಸಿರಾಟದ ವೇಗವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಶಕ್ತಿ ಪ್ರವಹಿಸುವಂತೆ ಮಾಡುತ್ತವೆ. ನರನಾಡಿಗಳು ಸ್ವಚ್ಛವಾಗುವಂತೆ ಮಾಡುತ್ತವೆ. ಮೆದುಳು ಶಾಂತ ಚಿತ್ತವಾಗುತ್ತದೆ. ಕೆಮ್ಮು ದಮ್ಮು ಸಮಸ್ಯೆ ಇರುವವರಿಗೆ ಕಪಾಲಭಾತಿ ಅತ್ಯುತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read