ಬೆಂಗಳೂರು : ಅತ್ಯಾಚಾರ ಕೇಸ್’ ನಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ನಾಳೆ ಪ್ರಜ್ವಲ್ ರೇವಣ್ಣ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ. ಕೋರ್ಟ್ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕೋರ್ಟ್ ನಲ್ಲೇ ಪ್ರಜ್ವಲ್ ಕಣ್ಣೀರು ಹಾಕಿದ್ದಾರೆ.
ಹೌದು, ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಜಡ್ಜ್ ಸಂತೋಷ್ ಗಜಾನನ ಭಟ್ ಒಟ್ಟು 4 ಪ್ರಕರಣಗಳ ಪೈಕಿ ಕೆ . ಆರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ತೀರ್ಪು ಪ್ರಕಟಿಸಿದ್ದಾರೆ.
ಅತ್ಯಾಚಾರ ಕೇಸ್’ ನಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ಗೆ ಬಿಗ್ ಶಾಕ್ ಎದುರಾಗಿದ್ದು, ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ನಾಳೆ ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.ಮಾಜಿ ಸಂಸದ ‘ ಪ್ರಜ್ವಲ್ ರೇವಣ್ಣ’ ವಿರುದ್ಧದ ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿಕೆಯಾಗಿತ್ತು. ಇಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ಕೆಆರ್ ನಗರ ಮೂಲದ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಮೊನ್ನೆ ಪ್ರಕರಣ ಸಂಬಂಧ ಎರಡೂ ಕಡೆ ವಕೀಲರಿಂದ ಸ್ಪಷ್ಟನೆ ಕೇಳಿದ ಕೋರ್ಟ್ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿತ್ತು. . ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪು ಮುಂದೂಡಿಕೆಯಾಗಿದೆ ಎಂದು ಜಡ್ಜ್ ಹೇಳಿದ್ದರು.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ಸಿಐಡಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಜ್ವಲ್ ಪ್ರಕರಣದಲ್ಲಿ ಪ್ರಕಟವಾಗುತ್ತಿರುವ ಮೊದಲ ತೀರ್ಪು ಇದಾಗಿದೆ.ಕಳೆದ 14 ತಿಂಗಳಿನಿಂದ ಪ್ರಜ್ವಲ್ ರೇವಣ್ಣ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.