ವಿಜಯಪುರ: ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆಯ ವೇಳೆ ಇಟ್ಟಿಗೆಯಿಂದ ಜಜ್ಜಿ ಯುವಕನನ್ನು ಮರ್ಡರ್ ಮಾಡಲಾಗಿದೆ.
ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿ ಘಟನೆ ನಡೆದಿದೆ. ಒಟ್ಟಿಗೆ ಸೇರಿಕೊಂಡು ಮೂವರು ಮದ್ಯ ಸೇವಿಸಿದ್ದಾರೆ. ಈ ವೇಳೆ ಜಗಳ ಶುರುವಾಗಿ ತಾರಕಕ್ಕೇರಿದೆ. ಜಗಳದ ವೇಳೆಯಲ್ಲಿ ಇಟ್ಟಿಗೆಯಿಂದ ಜಜ್ಜಿ ಓರ್ವ ಯುವಕನನ್ನು ಕೊಲೆ ಮಾಡಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.