ಬೆಂಗಳೂರು : ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕಮಿಷನರ್ ಗೆ ದೂರು ನೀಡಿದ ಬಳಿಕ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ನಟಿ ರಮ್ಯಾ ನಾನು ಕಮಿಷನರ್ ಗೆ ದೂರು ನೀಡಿದ್ದೇನೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಂದು ನಟಿ ರಮ್ಯಾ ಹೇಳಿದರು.
ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ನನ್ನ ಪೋಸ್ಟ್ ಗೆ ಕೀಳಾಗಿ ಮೆಸೇಜ್ ಮಾಡಿದ್ದರು. ಇದರಿಂದ ನನಗೆ ಬಹಳ ಬೇಜರಾಯಿತು . ಹುಡುಗರಂತೆ ಹೆಣ್ಮಕ್ಕಳಿಗೂ ಸ್ವಾತಂತ್ರ್ಯವಿದೆ . ನಾನು ಎಲ್ಲಾ ಹೆಣ್ಣು ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಚಿತ್ರರಂಗದ ಹಲವರು ನನಗೆ ನನಗೆ ಸಪೋರ್ಟ್ ಮಾಡಿದ್ದಾರೆ, ಮೆಸೇಜ್ ಮಾಡಿ, ಕಾಲ್ ಮಾಡಿ ಬೆಂಬಲ ನೀಡಿದ್ದಾರೆ ಎಂದರು.
ಹೊರಗೆ ಹೇಳಲು ಸಂಕೋಚ , ಅದಕ್ಕೆ ನನಗೆ ಮೆಸೇಜ್ ಮಾಡಿದ್ದಾರೆ. ರಕ್ಷಿತಾ, ವಿಜಯಲಕ್ಷ್ಮಿ ನನ್ನ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಯಾವ ಒತ್ತಡಲಿದ್ದಾರೋ ಗೊತ್ತಿಲ್ಲ ಎಂದರು.
You Might Also Like
TAGGED:ರಮ್ಯಾ