ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದ ಸಾವಿನ ಸರಣಿ ಮುಂದುವರೆದಿದ್ದು, ಹೊನ್ನಾಳಿಯಲ್ಲಿ ದೈಹಿಕ ಶಿಕ್ಷಕ, ಕೊಪ್ಪಳದಲ್ಲಿ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಬಿವಿಎಸ್ ಶಾಲೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ದೈಹಿಕ ಶಿಕ್ಷಕ ರವಿಕುಮಾರ್ ಮೃತಪಟ್ಟಿದ್ದಾರೆ. 8 ವರ್ಷದ ಪುತ್ರಿ, 6 ವರ್ಷದ ಪುತ್ರನ ಜೊತೆಗೆ ಶಾಲೆಗೆ ಬರುತ್ತಿದ್ದ ಶಿಕ್ಷಕ ರವಿಕುಮಾರ್(28) ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೊಪ್ಪಳದಲ್ಲಿ ಹೃದಯಾಘಾತದಿಂದ 26 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಶಿವಗಂಗಾ ಲೇಔಟ್ ನಿವಾಸಿ ಮಂಜುಳಾ ಹೂಗಾರ ಮೃತಪಟ್ಟವರು. ಲೋ ಬಿಪಿಯಾಗಿ ಕುಸಿದು ಬಿದ್ದಿದ್ದ ಮಂಜುಳಾ ಹೂಗಾರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ಹೂಗಾರ ಕೆಲವು ದಿನಗಳ ಹಿಂದೆ ಕೆಲಸವನ್ನು ಬಿಟ್ಟು ಕೊಪ್ಪಳಕ್ಕೆ ಬಂದಿದ್ದರು.