ಬೆಂಗಳೂರು: ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ಮರೆತಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ವಿಧಾನ ಪರಿಷತ್ ಉಪ ಕಾರ್ಯದರ್ಶಿ ಕೆ.ಜಿ. ಜಲಜಾಕ್ಷಿ ಅವರನ್ನು ಅಮಾನತು ಮಾಡಲಾಗಿದೆ. ನವೆಂಬರ್ 26ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಗಿತ್ತು. ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಮರೆತಿದ್ದರು.
ಘಟನೆ ನಡೆದ 7 ತಿಂಗಳ ನಂತರ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕಾರ್ಯಕ್ರಮ ಆರಂಭಕ್ಕೆ ಮುನ್ನ ನೆನಪಿಸಿದ್ದರೂ ಭಾವಚಿತ್ರ ಇಡಲು ಕಡೆಗಣಿಸಿದ ಆರೋಪ ಕೇಳಿ ಬಂದಿತ್ತು. ಅಂಬೇಡ್ಕರ್ ಗೆ ಅವಮಾನಿಸಲಾಗಿದೆ ಎಂದು ದಲಿತ ಸಂಘಟನೆಗಳಿಂದ ದೂರು ನೀಡಲಾಗಿತ್ತು. ಅಲ್ಲದೇ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಒತ್ತಾಯಿಸಿದ್ದವು. ಇಲಾಖಾ ವಿಚಾರಣೆಯ ನಂತರ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಅಮಾನತು ಮಾಡಲಾಗಿದೆ.