BREAKING : ರಾಜಸ್ಥಾನದಲ್ಲಿ ಭೀಕರ ಸಿಲಿಂಡರ್ ಸ್ಪೋಟ ; ಒಂದೇ ಕುಟುಂಬದ ಐವರು ಸಜೀವ ದಹನ

ರಾಜಸ್ಥಾನ : ಜೈಪುರದ ವಿಶ್ವಕರ್ಮದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸಿಲಿಂಡರ್ ಸ್ಪೋಟದಲ್ಲಿ ಐವರು ಸಜೀವ ದಹನವಾಗಿದ್ದಾರೆ.

ವಿಶ್ವಕರ್ಮದ ಜೈಸಲ್ಯ ಗ್ರಾಮದಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಮುಗ್ಧ ಮಕ್ಕಳು ಸೇರಿದಂತೆ ಇಡೀ ಕುಟುಂಬ ಸಾವನ್ನಪ್ಪಿತು. ಸಿಲಿಂಡರ್ ಸ್ಪೋಟದಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮೃತರೆಲ್ಲರೂ ಬಿಹಾರ ಮೂಲದವರು ಎಂದು ಹೇಳಲಾಗಿದೆ. ಪೊಲೀಸರು ಎಫ್ಎಸ್ಎಲ್ ತಂಡವನ್ನು ಸ್ಥಳಕ್ಕೆ ಕರೆಸಿದ್ದಾರೆ.

ಬಿಹಾರದ ಮಧುಬನಿಯ ಕುಟುಂಬವೊಂದು ಜೈಸಲ್ಯ ಗ್ರಾಮದಲ್ಲಿ ಬಾಡಿಗೆಗೆ ವಾಸವಾಗಿತ್ತು. ರಾತ್ರಿ ಕುಟುಂಬದ ಎಲ್ಲಾ ಸದಸ್ಯರು ಮಲಗಿದ್ದಾಗ, ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.ಆದರೆ ಮನೆಯಿಂದ ಹೊರಬರಲು ಯಾರಿಗೂ ಅವಕಾಶ ಆಗಿಲ್ಲ. ಗಂಡ ಹೆಂಡತಿ ಮಕ್ಕಳು ಸೇರಿದಂತೆ ಐವರು ಸಜೀವ ದಹನವಾಗಿದ್ದಾರೆ. ನೆರೆಹೊರೆಯವರು ಮಾಹಿತಿ ನೀಡಿದ ನಂತರ, ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿತು. ಆದರೆ ಅಷ್ಟೊತ್ತಿಗಾಗಲೇ ಕುಟುಂಬಸ್ಥರು ಮೃತಪಟ್ಟಿದ್ದರು.

ಸುಟ್ಟ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್ಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಫ್ಎಸ್ಎಲ್ ತಂಡವೂ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read