ಮಡಿಕೇರಿ: ಮಲ ಸಹೋದರನಿಂದ ಸಹೋದರರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಘಟನೆ ನಡೆದಿದೆ.
ಸಹೋದರರಾದ ರೋಷನ್(37), ಸಚಿನ್(40) ಗಾಯಗೊಂಡಿದ್ದಾರೆ. ಮಲ ಸಹೋದರರ ಮೇಲೆ ಬಾಳೆರ ಟಿಮ್ಸ್ ಗುಂಡಿನ ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹುದಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.