ಬೆಂಗಳೂರು : ಧರ್ಮಸ್ಥಳದ ಬರುಡೆ ಕೇಸ್ ನಡುವೆ ಎಸ್ ಐ ಟಿ (SIT) ಸದ್ದಿಲ್ಲದೇ ‘ಸೌಜನ್ಯ ಕೇಸ್’ ತನಿಖೆ ಆರಂಭಿಸಿದ್ಯಾ ಎಂಬ ಪ್ರಶ್ನೆ ಮೂಡಿದೆ.
ಹೌದು. ಎಸ್ ಐ ಟಿ ಉದಯ್ ಕುಮಾರ್ ಜೈನ್ ಸೇರಿ ಹಲವರಿಗೆ ಬುಲಾವ್ ನೀಡಿದೆ. ಸೌಜನ್ಯ ಮನೆಯವರು ಉದಯ್ ಕುಮಾರ್ ಸೇರಿ ಹಲವರ ಮೇಲೆ ಆರೋಪ ಮಾಡಿದ್ದರು. ಈ ಹಿನ್ನೆಲೆ ಎಸ್ ಐ ಟಿ ಸದ್ದಿಲ್ಲದೇ ತನಿಖೆ ಆರಂಭಿಸಿದ್ಯಾ ಎಂಬ ಪ್ರಶ್ನೆ ಮೂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ ಐ ಟಿ ಕಚೇರಿಗೆ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಧೀರಜ್ ಹಾಗೂ ಮಲ್ಲಿಕ್ ಜೈನ್ ಗೆ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಉದಯ್ ಕುಮಾರ್ ಜೈನ್ ಎಸ್ ಐ ಟಿ ಕಚೇರಿಯತ್ತ ಆಗಮಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗಾರರ ಜೊತೆ ಉದಯ್ ಕುಮಾರ್ ಜೈನ್ ‘ ನಾನು ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಸ್ ಐ ಟಿ ಅಧಿಕಾರಿಗಳ ನಡೆ ಬಹಳ ಕುತೂಹಲ ಮೂಡಿಸಿದೆ.
TAGGED:ಸೌಜನ್ಯ ಕೇಸ್