ಹೊಸ ವಾಹನ ಖರೀದಿದಾರರಿಗೆ ಸೆಸ್ ಬಿಸಿ ತಟ್ಟಲಿದೆ. ಸರ್ಕಾರದಿಂದ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.
ನೂತನವಾಗಿ ಖರೀದಿಸುವ ವಾಹನದ ಮೌಲ್ಯವನ್ನು ಆಧರಿಸಿ ಸೆಸ್ ಜಾರಿ ಮಾಡಲಾಗುವುದು. ಹಾಲಿ ಎಲ್ಲಾ ಮಾದರಿಯ ವಾಹನಗಳಿಗೆ ಕೇವಲ 1000 ರೂ. ಇದೆ. ತಿದ್ದುಪಡಿ ಅನ್ವಯ ಕಾರ್ ನ ಬೆಲೆ ಆಧರಿಸಿ ಸೆಸ್ ಜಾರಿ ಮಾಡಲಾಗುವುದು.
ಯಾವ ಮಾದರಿ ಕಾರ್ ಗಳಿಗೆ ಎಷ್ಟು ಸೆಸ್ ವಿಧಿಸಬೇಕು ಎನ್ನುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕದಲ್ಲಿ ಈ ಸೆಸ್ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಸಂಪುಟ ಸಭೆ ನಿರ್ಧಾರದ ಬಳಿಕ ಸೆಸ್ ಹೊರೆ ತಟ್ಟಲಿದೆ ಎನ್ನಲಾಗಿದೆ.
