ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ಫೇಕ್ ಅಕೌಂಟ್ ಕಾಟ ಎದುರಾಗಿದೆ.
ಮಣಿವಣ್ಣನ್ ಹೆಸರಲ್ಲಿ ಸೈಬರ್ ವಂಚಕರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಕಳೆದ 9 ತಿಂಗಳಲ್ಲಿ ಎರಡನೇ ಬಾರಿಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಸೆಂಟ್ರಲ್ ಸೈಬಲ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
9 ತಿಂಗಳ ಹಿಂದೆಯೇ ನಕಲಿ ಖಾತೆಯನ್ನು ಸೈಬರ್ ವಂಚಕರು ತೆರೆದಿದ್ದರು. ಆಗ ಪೊಲೀಸರಿಗೆ ಮಣಿವಣ್ಣನ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಯಾವ ಕ್ರಮವೂ ಆಗಿರಲಿಲ್ಲ. ಕೇಸ್ ದಾಖಲಾಗುತ್ತಿದ್ದಂತೆ ವಂಚಕರು ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ದರು. ಈಗ ಮತ್ತೆ ಖಾತೆ ತೆರೆದಿದ್ದಾರೆ. ಹೀಗಾಗಿ ಮತ್ತೆ ದೂರು ನೀಡಲಾಗಿದೆ.
ಮಣಿವಣ್ಣನ್ ಫೋಟೋ ಬಳಿಸಿ ಖದೀಮರು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ಫರ್ನಿಚರ್ ಮಾರಾಟದ ಹೆಸರಲ್ಲಿ ಮೆಸೇಜ್ ಮಾಡಿದ್ದಾರೆ. ನಮ್ಮ ಸ್ನೇಹಿತರು ಸಿಆರ್ಪಿಎಫ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವರ್ಗಾವಣೆಯಾಗುತ್ತಿದ್ದು, ಫರ್ನಿಚರ್ ಮಾರಾಟ ಮಾಡುತ್ತಿದ್ದಾರೆ. ನಾನು ನೋಡಿದ್ದೇನೆ. ಬೇಕಾದರೆ ನೀವು ಖರೀದಿಸಬಹುದು ಎಂದು ಮೆಸೇಜ್ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೋಲೀಸರು ತನಿಖೆ ಕೈಗೊಂಡಿದ್ದಾರೆ.