ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್’ವುಡ್ ನಿರ್ಮಾಪಕ ಎನ್.ಎಂ ಕುಮಾರ್ ಅರೆಸ್ಟ್ ಆಗಿದ್ದಾರೆ.
ಖ್ಯಾತ ನಟ ಜಗ್ಗೇಶ್ ಅವರು ನಿರ್ಮಾಪಕ ಎಂಎನ್ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
1.25 ಕೋಟಿ ರೂ ವಂಚಿಸಿರುವ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಉಪ್ಪಾರಪೇಟೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಟ ಜಗ್ಗೇಶ್ ಯಾವ ಕಾರಣಕ್ಕೆ ದೂರು ದಾಖಲಿಸಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಇದು ಸಾಲದ ಹಣವೋ ಅಥವಾ ಸಿನಿಮಾದ ಹಣವೋ ಎಂಬುದು ಸ್ಪಷ್ಟವಾಗಿಲ್ಲ.