ಯಾದಗಿರಿ: ಪ್ರಯಾಣಿಕರಿಗೆ ಟಿಕೆಟ್ ನೀಡದೇ ರೈಲ್ವೆ ಸಿಬ್ಬಂದಿ ದರ್ಪ ತೋರಿದ್ದಾರೆ. ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೇ ಸಿಬ್ಬಂದಿ ಮಹೇಶ್ ನನ್ನು ಅಮಾನತು ಮಾಡಲಾಗಿದೆ.
ಗುಂತಕಲ್ ರೈಲ್ವೆ ವಿಭಾಗ ಅಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಯಾದಗಿರಿ ನಿಲ್ದಾಣದಲ್ಲಿ ನೂರಾರು ಜನ ಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರೂ ಟಿಕೆಟ್ ನೀಡದೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು.
ಯಾದಗಿರಿ ನಿಲ್ದಾಣದ ಟಿಕೆಟ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದರೂ, ಬಹಳ ಹೊತ್ತು ಮೊಬೈಲ್ ನಲ್ಲಿ ಮಾತನಾಡುತ್ತಾ ಟಿಕೆಟ್ ನೀಡಿರಲಿಲ್ಲ. ಈ ವೇಳೆ ವಿಡಿಯೋ ಮಾಡಿ ಸ್ಟೇಷನ್ ಮಾಸ್ಟರ್ ಗೆ ರವಾನೆ ಮಾಡಲಾಗಿತ್ತು. ಕೂಡಲೇ ಮಹೇಶ್ ನನ್ನು ಮೇಲಾಧಿಕಾರಿ ಅಮಾನತು ಮಾಡಿದ್ದಾರೆ.