ನವದೆಹಲಿ: ಚೀನಾ ಮತ್ತು ಜಪಾನ್ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಬಂದಿಳಿದರು.
ಜಪಾನ್‌ನಲ್ಲಿ, ಪ್ರಧಾನಿ ಮೋದಿ 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಚೀನಾದಲ್ಲಿ, ಪ್ರಧಾನಿ ಮೋದಿ ಶಾಂಘೈ ಸಹಕಾರ ಸಂಸ್ಥೆ(SCO) ಶೃಂಗಸಭೆಯಲ್ಲಿ ಭಾಗವಹಿಸಿದರು.
ಎಸ್.ಸಿ.ಓ. ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾದ ಟಿಯಾಂಜಿನ್ ಗೆ ತೆರಳಿದ್ದ ಪ್ರಧಾನಿ ಮೋದಿ ದೆಹಲಿಗೆ ವಾಪಸ್ ಆಗಿದ್ದಾರೆ. ಏರ್ ಇಂಡಿಯಾ ಒನ್ ವಿಮಾನದಲ್ಲಿ ಅವರು ದೆಹಲಿಗೆ ಆಗಮಿಸಿದರು.
ರಷ್ಯಾ, ಚೀನಾ ಅಧ್ಯಕ್ಷರ ಜೊತೆಗೆ ಮೋದಿ ಚರ್ಚೆ ನಡೆಸಿದರು. ವ್ಯಾಪಾರ, ಭದ್ರತೆಯ ಸಂಬಂಧ ಮೋದಿ ಚರ್ಚೆ ನಡೆಸಿದ್ದು, ಇದಕ್ಕೂ ಮೊದಲು ಅವರು ಜಪಾನ್ ಗೆ ಭೇಟಿ ನೀಡಿ ಉಭಯ ದೇಶಗಳ ನಡುವೆ ಹಲವು ಒಪ್ಪಂದ ಮಾಡಿಕೊಂಡಿದ್ದರು.
ಆಗಸ್ಟ್ 29ರಂದು ಜಪಾನ್ ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ನಂತರ ಅಲ್ಲಿಂದ ಚೀನಾಕ್ಕೆ ತೆರಳಿದ್ದರು. ಟಿಯಾಂಜಿನ್ ನಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಿ ದೆಹಲಿಗೆ ಮರಳಿದ್ದಾರೆ.
Prime Minister Narendra Modi lands in Delhi after concluding his visit to China and Japan.
— ANI (@ANI) September 1, 2025
In Japan, PM Modi participated in the 15th India-Japan Annual Summit, and in China, PM Modi attended the Shanghai Cooperation Organisation (SCO) Summit. pic.twitter.com/zZT3QbAMvQ
#WATCH | Prime Minister Narendra Modi returns to Delhi after concluding his visit to China and Japan.
— ANI (@ANI) September 1, 2025
In Japan, PM Modi participated in the 15th India-Japan Annual Summit, and in China, PM Modi attended the Shanghai Cooperation Organisation (SCO) Summit.
(Source: ANI/DD) pic.twitter.com/Z0c42aVb31