BREAKING: ಖ್ಯಾತ ನಟ ಸತೀಶ್ ಶಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ‘ಸಾರಾಭಾಯಿ vs ಸಾರಾಭಾಯಿ’ ನಟ ಸತೀಶ್ ಶಾ(74) ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದಾರೆ. ಕಲ್ ಹೋ ನಾ ಹೋ, ಜಾನೆ ಭಿ ದೋ ಯಾರೋ, ಸಾರಾಭಾಯಿ v/S ಸಾರಾಭಾಯಿ, ಮೈ ಹೂ ನಾ ಸೇರಿ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಅವರ ಹಠಾತ್ ನಿಧನಕ್ಕೆ ಚಿತ್ರೋದ್ಯಮದವರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ ಅವರು ಸತೀಶ್ ಶಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸತೀಶ್ ಶಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರನ್ನು ಭಾರತೀಯ ಮನರಂಜನೆಯ ನಿಜವಾದ ದಂತಕಥೆ ಎಂದು ಸ್ಮರಿಸಲಾಗುತ್ತದೆ. ಅವರ ಪ್ರಯತ್ನವಿಲ್ಲದ ಹಾಸ್ಯ ಮತ್ತು ಅಪ್ರತಿಮ ಪ್ರದರ್ಶನಗಳು ಅಸಂಖ್ಯಾತ ಜೀವನಗಳಲ್ಲಿ ನಗುವನ್ನು ತಂದವು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಖ್ಯಾತ ನಟ ಜಾನಿ ಲಿವರ್ ಅವರು ಸತೀಶ್ ಶಾ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ನಾವು ಒಬ್ಬ ಮಹಾನ್ ಕಲಾವಿದ ಮತ್ತು 40 ವರ್ಷಗಳಿಗೂ ಹೆಚ್ಚು ಕಾಲ ನನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಹಂಚಿಕೊಳ್ಳಲು ತುಂಬಾ ದುಃಖವಾಗುತ್ತಿದೆ. ನಂಬಲು ಕಷ್ಟ – ನಾನು ಎರಡು ದಿನಗಳ ಹಿಂದೆಯೇ ಅವರೊಂದಿಗೆ ಮಾತನಾಡಿದ್ದೆ. ಸತೀಶ್ ಭಾಯ್, ನಿಮ್ಮನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ಚಲನಚಿತ್ರ ಮತ್ತು ದೂರದರ್ಶನಕ್ಕೆ ನಿಮ್ಮ ಅಪಾರ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read