ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಮೂಲಕ ದೆಹಲಿಯ ಶಾಲಾ ಬಾಲಕಿಯರು ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಶಾಲೆಗೆ ತೆರಳಿ, ಅಲ್ಲಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಸಂಭ್ರಮದಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.
ರಕ್ಷಾ ಬಂಧನ ಹಬ್ಬವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಅನಿಲ ಬೆಲೆಗಳ ಕಡಿತವು ನನ್ನ ಕುಟುಂಬದ ಸಹೋದರಿಯರ ಆರಾಮವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿ ಸಂತೋಷವಾಗಿರಲಿ, ಆರೋಗ್ಯವಾಗಿರಲಿ, ಸಂತೋಷವಾಗಿರಲಿ, ಇದು ದೇವರ ನನ್ನ ಹಾರೈಕೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
#WATCH | School girls tie Rakhi to Prime Minister Narendra Modi in Delhi, as they celebrate the festival of #RakshaBandhan with him. pic.twitter.com/Hhyjx63xgi
— ANI (@ANI) August 30, 2023