ಬೀದರ್: 15ನೇ ಹಣಕಾಸಿನ ಅನುದಾನದಲ್ಲಿ ನಿಯಮ ಉಲ್ಲಂಘನೆ ಆರೋಪದ ಮೇಲೆ ಹುಲಸೂರು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಮಿಲಿಂದಕರ ಅವರನ್ನು ಅಮಾನತು ಮಾಡಲಾಗಿದೆ.
ಬೀದರ್ ತಾಲೂಕಿನ ಹುಲಸೂರು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಅವರನ್ನು ಅಮಾನತುಗೊಳಿಸಿ ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ್ ಬದೋಲೆ ಆದೇಶ ಹೊರಡಿಸಿದ್ದಾರೆ. ರಮೇಶ್ ವಿರುದ್ಧ ಸಾಮಾನ್ಯ ಸಭೆಯನ್ನು ನಡೆಸದೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಹಣ ಲೂಟಿ ಮಾಡಿದ ಆರೋಪ ಕೇಳಿ ಬಂದಿದೆ.
ಸದಸ್ಯರ ಗಮನಕ್ಕೆ ತಾರದೆ ನಿಯಮಗಳನ್ನು ಮೀರಿ ಬಿಲ್ ಪಾವತಿಸಿದ ಬಗ್ಗೆ ದೂರು ನೀಡಲಾಗಿತ್ತು. ಜಿಲ್ಲಾ ಪಂಚಾಯತಿ ಸಿಇಒಗೆ ಗ್ರಾಮ ಪಂಚಾಯತಿ ಸದಸ್ಯರು ದೂರು ನೀಡಿದ್ದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತನಿಖೆಯ ವೇಳೆ ಆಕ್ರಮ ನಡೆದಿರುವುದು ಸಾಬೀತಾಗಿತ್ತು. ನಿಯಮ ಮೀರಿ 15ನೇ ಹಣಕಾಸಿನ ಅನುದಾನ ಪಾವತಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಮಿಲಿಂದಕರ ಅವರನ್ನು ಅಮಾನತು ಮಾಡಲಾಗಿದೆ.
