ಧಾರವಾಡ: ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹಾಸನ ಜಿಲ್ಲೆಯ ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನವೆಂಬರ್ ಕ್ರಾಂತಿ ಕುರಿತಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯವರೆಗೆ ಏನೂ ಹೇಳುವುದಿಲ್ಲ ಸಿದ್ದರಾಮಯ್ಯ ಸರ್ಕಾರಕ್ಕೆ ಭಯವಿಲ್ಲ. ಉಳಿದದ್ದು ಸಂಕ್ರಾಂತಿ ಆದಮೇಲೆ ನೋಡಿ ಹೇಳಬೇಕು ಎಂದು ಹೇಳಿದ್ದಾರೆ.
ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಹೇಳಿದ್ದೆ. ಮಲೆನಾಡು ಬಯಲು ಸೀಮೆ ಆಗುತ್ತದೆ, ಬಯಲು ಸೀಮೆ ಮಲೆನಾಡು ಆಗಿದೆ ಎಂದಿದ್ದಾರೆ.
ರಾಜ್ಯದ ಜಾತಿ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀಗಳು, ರಾಜ್ಯದ ಜನರು ದಡ್ಡರಲ್ಲ, ಬುದ್ಧಿವಂತರಿದ್ದಾರೆ. ಜ್ಞಾನಿಗಳು ಇದ್ದಾರೆ. ತಿಳಿವಳಿಕೆ ಹೊಂದಿದ್ದಾರೆ. ಜನರಿಗೆ ಯಾವುದೇ ಬೇಕು ಅದನ್ನು ಅವರೇ ಮಾಡುತ್ತಾರೆ ಎಂದು ಹೇಳಿದ್ದಾರೆ.
ನಿಖರ ಭವಿಷ್ಯಕ್ಕೆ ಹೆಸರಾದ ಸ್ವಾಮೀಜಿ ರಾಜಕೀಯ, ಹವಾಮಾನ ಹಾಗೂ ಪ್ರಪಂಚದ ವಿದ್ಯಮಾನಗಳ ಬಗ್ಗೆ ಭವಿಷ್ಯ ಹೇಳುವಲ್ಲಿ ಹೆಸರಾಗಿದ್ದಾರೆ.