ಕೋಲಾರ: ಶಾಲೆಗೆ ಹೋಗಿದ್ದ ಸಹೋದರಿಯರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ರಮೇಶ್ ಎಂಬುವವರ ಪುತ್ರಿಯರು ಶಾಲೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ.
ಮೋನಿಕಾ(14), ತನುಶ್ರೀ(11) ಶಾಲೆಗೆ ಹೋದವರು ಮನೆಗೆ ಬಂದಿಲ್ಲ. ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ನಿವಾಸಿಗಳಾಗಿರುವ ಇವರು ಮುಳಬಾಗಿಲಿನ ಜ್ಞಾನವಾಹಿನಿ ಶಾಲೆಯಲ್ಲಿ ಓದುತ್ತಿದ್ದಾರೆ.
ಬೆಳಗ್ಗೆ ಶಾಲೆಗೆ ಹೋಗುವುದಾಗಿ ವಿದ್ಯಾರ್ಥಿನಿಯರಾದ ಮೋನಿಕಾ ಮತ್ತು ತನುಶ್ರೀ ಮನೆಯಿಂದ ತೆರಳಿದ್ದರು. ಶಾಲೆಗೂ ಹೋಗದೆ, ಮನೆಗೂ ಬಾರದೆ ಬಾಲಕಿಯರು ನಾಪತ್ತೆಯಾಗಿದ್ದಾರೆ. ಪೋಷಕರು ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಳಬಾಗಿಲು ಟೌನ್ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
