ಉತ್ತರ ಪ್ರದೇಶದ ನೋಯ್ಡಾದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊಬ್ಬರು ಕಟ್ಟಡದ 3ನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದಾರೆ.
ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ಆಘಾತಕಾರಿ ವೀಡಿಯೊದಲ್ಲಿ ಬೆಂಕಿ ಕಾಣಿಸಿಕೊಂಡ ಕಟ್ಟಡದ ಮೂರನೇ ಮಹಡಿಯಿಂದ ವ್ಯಕ್ತಿ ಜಿಗಿದಿದ್ದಾರೆ. ರಕ್ಷಣೆಗೆ ಕೆಳಗೆ ನಿಂತಿದ್ದ ಜನ ಅವರಿಗೆ ಕೆಳಗೆ ಜಿಗಿಯಿರಿ ಎಂದು ಸೂಚಿಸುತ್ತಾ ಅವರನ್ನ ಹಿಡಿದುಕೊಳ್ಳಲು ಮುಂದಾಗಿದ್ದರು.
ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಮಾಹಿತಿಯ ಪ್ರಕಾರ, ಗ್ರೇಟರ್ ನೋಯ್ಡಾ ವೆಸ್ಟ್ ನ ಬಿಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾಲಕ್ಸಿ ಪ್ಲಾಜಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
https://twitter.com/NikhilCh_/status/1679401605287014400?ref_src=twsrc%5Etfw%7Ctwcamp%5Etweetembed%7Ctwterm%5E1679401605287014400%7Ctwgr%5Ee38d49462833fa358edc493c7aef7580b8fe1b61%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbreaking-fire-breaks-out-at-galaxy-plaza-building-in-greater-noida-people-jump-out-of-3rd-floor-window