ಕಲಬುರಗಿ: ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮುರಡಿಯಲ್ಲಿ ಪತ್ನಿಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದ ಗೆಳೆಯನ ಹತ್ಯೆ ಮಾಡಲಾಗಿದೆ.
28 ವರ್ಷದ ಅಂಬರೀಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಅಂಬರೀಶ್ ನನ್ನು ಅಜಯ್ ವೈರ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಅಜಯ್ ಪತ್ನಿಯ ಜೊತೆಗೆ ಅಂಬರೀಶ್ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಕೆಲವು ದಿನಗಳ ಹಿಂದೆ ಅಜಯ್ ಪತ್ನಿ ಮನೆಯನ್ನು ತೊರೆದಿದ್ದರು. ಪತ್ನಿ ನನ್ನ ಜೊತೆ ಇರಲು ಹೇಳುವಂತೆ ಅಂಬರೀಶ್ ಬೆಂಗಳೂರಿನಿಂದ ಮುರುಡಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ತನ್ನ ಮನೆಯಲ್ಲಿಯೇ ಅಂಬರೀಶ್ ನನ್ನು ಅಜಯ್ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಘಟನೆಯ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.