ಬೆಂಗಳೂರು: ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರಿಗೆ ಸಂಕಷ್ಟ ಎದುರಾಗಿದೆ.
ಬೈರತಿ ಬಸವರಾಜ್ ಅವರು ನಾಳೆ ವಿಚಾರಣೆಗೆ ಹಾಜರಾಗಲಿ ಎಂದು ಹೈಕೋರ್ಟ್ ಸೂಚಿಸಿದೆ. ಪೊಲೀಸರ ನೋಟಿಸ್ ನಂತೆ ನಾಳೆ ಬೆಳಗ್ಗೆ 11:30 ಕ್ಕೆ ವಿಚಾರಣೆಗೆ ಹಾಜರಾಗಲಿ, ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಬಿಎನ್ಎಸ್ 35(3,4,5) ಅಡಿಯಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಬೇಕೆಂದು ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರ ಪೀಠದಿಂದ ಆದೇಶಿಸಲಾಗಿದೆ.
ಎಫ್ಐಆರ್ ರದ್ದು ಕೋರಿ ಬೈರತಿ ಬಸವರಾಜು ಅರ್ಜಿ ಸಲ್ಲಿಸಿದ್ದು, ದೂರು ನೀಡಿದ ಮಹಿಳೆ ಮೇಲೆ ಕೊಲೆಯಾದ 24 ಗಂಟೆಯೊಳಗೆ ಪ್ರಭಾವ ಬೀರಿದ್ದಾರೆ. ಕೋರ್ಟ್ ಆದೇಶ ರಕ್ಷಣೆಗೆ ಬಳಸಿಕೊಳ್ಳಬಹುದು ಎಂದು ಎಸ್ಪಿಪಿ ವಾದ ಮಂಡಿಸಿದ್ದಾರೆ. ಜುಲೈ 23ಕ್ಕೆ ಬೈರತಿ ಬಸವರಾಜು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಬುಧವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಬೈರತಿ ಬಸವರಾಜು ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿದೆ.