ಯಾದಗಿರಿ : ಉಸಿರುಗಟ್ಟಿಸಿ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯ ಕಂಚಗಾರಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಮಹಾದೇವಿ (40 ) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ.
7 ವರ್ಷದ ಹಿಂದೆ ಮಹಾದೇವಿ ಪತಿ ಸಾವನ್ನಪ್ಪಿದ್ದರು. ಮಹಾದೇವಿ 7 ವರ್ಷದಿಂದ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು. ಕೊಲೆಯಾದ ಮಹಾದೇವಿ ಜೊತೆ ಊರಿನ ಕೆಲವರು ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಊರಿನ ಇಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ಯಾದಗಿರಿ