ದಾವಣಗೆರೆ : 10,000 ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಇ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ.
ಬೆಸ್ಕಾಂ ಎಇ ಮೋಹನ್ ಕುಮಾರ್ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮಲ್ಲಾಪುರ ರೈತ ಮಂಜುನಾಥ್ ಎಂಬವವರಿಂದ 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂsಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟಿಸಿ ದುರಸ್ತಿ ಮಾಡಿಕೊಡುವಂತೆ ಮಲ್ಲಾಪುರ ರೈತ ಮಂಜುನಾಥ್ ಎಂಬುವವರು ಬೆಸ್ಕಾಂ ಎಇ ಮೋಹನ್ ಕುಮಾರ್ ಗೆ ಮನವಿ ಸಲ್ಲಿಸಿದ್ದರು. ಆದರೆ ಲಂಚಬಾಕ ಅಧಿಕಾರಿ ಮೋಹನ್ 10,000 ಕ್ಕೆ ಬೇಡಿಕೆಯಿಟ್ಟಿದ್ದರು. ಅಂತೆಯೇ ಲಂಚ ಸ್ವೀಕರಿಸುವಾಗ ಮೋಹನ್ ಅಧಿಕಾರಿಗಳ ಕೈಯಲ್ಲಿ ತಗ್ಲಾಕೊಂಡಿದ್ದಾರೆ.