BREAKING: ಕೃಷ್ಣಾ ನದಿ ನೀರು ಹಂಚಿಕೆ ‘ನ್ಯಾಯಮಂಡಳಿ’ ಅವಧಿ ಒಂದು ವರ್ಷ ವಿಸ್ತರಣೆ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಕೃಷ್ಣಾ ನದಿ ನ್ಯಾಯಮಂಡಳಿ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 2026ರ ಜುಲೈ 31ರವರೆಗೆ ಅವಧಿ ವಿಸ್ತರಿಸಿ ಜಲಶಕ್ತಿ ಸಚಿವಾಲಯ ಆದೇಶ ಹೊರಡಿಸಿದೆ.

ಕೃಷ್ಣಾ ನದಿ ಅಂತರಾಜ್ಯ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ. ನ್ಯಾಯಮಂಡಳಿ ಹೆಚ್ಚಿನ ಸಮಯ ಕೋರಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವಧಿಯನ್ನು ವಿಸ್ತರಣೆ ಮಾಡಿದೆ.

ಈ ಹಿಂದೆ 2024ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ಅವಧಿಯನ್ನು ವಿಸ್ತರಿಸಿತ್ತು. 2004ರ ಏಪ್ರಿಲ್ ನಲ್ಲಿ ಕೃಷ್ಣಾ ನದಿ ನ್ಯಾಯ ಮಂಡಳಿ ರಚಿಸಲಾಗಿತ್ತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ಸ್ಥಾಪಿಸಲಾಗಿತ್ತು.

2010ರ ಡಿಸೆಂಬರ್ ನಲ್ಲಿ ನ್ಯಾಯ ಮಂಡಳಿ ಆರಂಭಿಕ ವರದಿ ಸಲ್ಲಿಸಿತ್ತು. ವರದಿಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. 2014ರಲ್ಲಿ ಆಂಧ್ರಪ್ರದೇಶ ವಿಭಜನೆಯ ಬಳಿಕ ವಿವಾದ ಮತ್ತಷ್ಟು ಜಟಿಲವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read