BREAKING : ಭಾರೀ ಮಳೆ ಹಿನ್ನೆಲೆ `ಕೇದಾರನಾಥ ಯಾತ್ರೆ’ ರದ್ದು

ನವದೆಹಲಿ : ಉತ್ತರಾಖಂಡದಲ್ಲಿ  ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರತಿಕೂಲ ಹವಾಮಾನದಿಂದಾಗಿ ಜಿಲ್ಲಾಡಳಿತವು ಸೋನ್ಪ್ರಯಾಗ್ ಮತ್ತು ಗೌರಿಕುಂಡ್ ನಲ್ಲಿ ಕೇದರಾನಾಥ ಯಾತ್ರಿಕರನ್ನು ನಿಲ್ಲಿಸಿದೆ. ಭಾರೀ ಮಳೆಯಿಂದಾಗಿ, 4 ರಾಜ್ಯ ರಸ್ತೆಗಳು ಮತ್ತು 10 ಲಿಂಕ್ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಮಂದಾಕಿನಿ ಮತ್ತು ಅಲಕನಂದಾ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ.

ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜುಲೈ 12 ರ ಇಂದು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಉತ್ತರಾಖಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ  ಮಾಹಿತಿ ನೀಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read