ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಮೊದಲ ದಿನವೇ ಭಾರತದಲ್ಲಿ 45 ಕೋಟಿ ರೂ., ವಿದೇಶಗಳಲ್ಲಿ 10 ಕೋಟಿ ರೂ. ಗಳಿಸಿದ್ದು, ಇಂದು 100 ಕೋಟಿ ಕ್ಲಬ್ ಗೆ ಸೇರುವ ಸಾಧ್ಯತೆ ಇದೆ. ಪ್ರೀಮಿಯರ್ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ 55 ಕೋಟಿ ರೂ. ಗಳಿಸಿರುವುದು ಹೊಸ ದಾಖಲೆಯಾಗಿದೆ.
ಭಾರತದಲ್ಲಿ ಒಟ್ಟು 6500 ಸ್ಕ್ರೀನ್ ಗಳಲ್ಲಿ ಸುಮಾರು 12, 511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿವೆ. ಎಲ್ಲಾ ಭಾಷೆಗಳು ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರೂಪಾಯಿ ಗಳಿಸಿದ್ದು, ಶುಕ್ರವಾರದ ವೇಳೆಗೆ ಸಿನಿಮಾ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ.
ಚಿತ್ರರಂಗದ ದಿಗ್ಗಜರಾದ ಶಿವರಾಜಕುಮಾರ್, ಪ್ರಭಾಸ್, ಜೂನಿಯರ್ ಎನ್ಟಿಆರ್ ಸೇರಿದಂತೆ ಹಲವರು ಚಿತ್ರವನ್ನು ಮೆಚ್ಚಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ, ದೇಶಾದ್ಯಂತ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಮೆರಿಕ ಸೇರಿದಂತೆ 30 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಸುಮಾರು 10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಅಂದಾಜು 20 ಕೋಟಿ ಮೊದಲ ದಿನ ಗಳಿಸಿದೆ.