BREAKING : ಪ್ರಬಲ ಭೂಕಂಪಕ್ಕೆ ಜಪಾನ್ ತತ್ತರ : ನಾಲ್ವರು ಸಾವು, ಹಲವರಿಗೆ ಗಾಯ |Earthquake

ಪ್ರಬಲ ಭೂಕಂಪಕ್ಕೆ ಜಪಾನ್ ತತ್ತರಗೊಂಡಿದ್ದು, ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ.

ಭೂಕಂಪಕ್ಕೆ ಜಪಾನ್ ನಲ್ಲಿ ಹಲವು ರಸ್ತೆಗಳನ್ನು ಜಖಂ ಆಗಿದೆ. ಕಟ್ಟಡಗಳು ನೆಲಕ್ಕುರುಳಿದೆ. ಜಪಾನ್ ನಲ್ಲಿ ಸಾವಿರಾರು ಜನರು ಸ್ಥಳಾಂತರ ಕೇಂದ್ರಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ 16.10ರ ಸುಮಾರಿಗೆ 7.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಸುನಾಮಿ ಎಚ್ಚರಿಕೆಯ ನಂತರ ಇಶಿಕಾವಾದ ನೊಟೊ ಕರಾವಳಿಗೆ 5 ಮೀಟರ್ ವರೆಗಿನ ಅಲೆಗಳು ಅಪ್ಪಳಿಸುತ್ತಿರುವುದರಿಂದ ಜನರು ಕರಾವಳಿ ಪ್ರದೇಶಗಳನ್ನು ಬೇಗನೆ ತೊರೆದು ಕಟ್ಟಡಗಳ ಮೇಲ್ಭಾಗಕ್ಕೆ ಅಥವಾ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಒತ್ತಾಯಿಸಿದ್ದಾರೆ . ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ 21 ಭೂಕಂಪಗಳು ದಾಖಲಾಗಿವೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read