ನವದೆಹಲಿ: ಪಾಕಿಸ್ತಾನದಿಂದ ಭಾರತದ ಮೇಲೆ ವಾಯು ದಾಳಿ ಯತ್ನ ಹಿನ್ನಲೆಯಲ್ಲಿ ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ ನೀಡಲಾಗಿದೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಚರ್ಚೆ ನಡೆಸಿದ್ದಾರೆ. ದೆಹಲಿಯಲ್ಲಿ ಸೇನಾ ಮುಖ್ಯಸ್ಥರ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತುರ್ತು ಸಭೆ ನಡೆಸಿದ್ದಾರೆ. ಸಿಡಿಎಸ್, ಮತ್ತು ಮೂವರು ಸೇನಾ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ.
ಪಾಕಿಸ್ತಾನದ ವಾಯು ದಾಳಿ ಯತ್ನ ವಿಫಲಗೊಳಿಸಿದ ಬೆನ್ನಲ್ಲೇ ಭಾರತೀಯ ಸೇನೆ ಲಾಹೋರ್ ಮೇಲೆ ವಾಯು ದಾಳಿ ನಡೆಸಿದೆ. ಲಾಹೋರ್ ನಗರದತ್ತ ಭಾರತದ ಕ್ಷಿಪಣಿಗಳು ದಂಡೆತ್ತಿ ಹೋಗಿವೆ. ಪಾಕಿಸ್ತಾನದ ಸಿಯಾಲ್ ಕೋಟ್ ಮೇಲೆಯೂ ಭಾರತೀಯ ಸೇನೆ ದಾಳಿ ನಡೆಸಿದೆ. ಪಾಕಿಸ್ತಾನಕ್ಕೆ ಭಾರತ ಸೇನೆ ಖಡಕ್ ಪ್ರತ್ಯುತ್ತರ ನೀಡಿದೆ.
ಜೈಸಲ್ಮೇರ್ ನಗರದ ಮೇಲೆ ಪಾಕಿಸ್ತಾನ 20 ಕ್ಷಿಪಣಿಗಳನ್ನು ಹಾರಿಸಿದ್ದು, ಎಸ್-400 ಸುದರ್ಶನ ಚಕ್ರ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಎಲ್ಲಾ ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ,
ಜಮ್ಮು ಕಾಶ್ಮೀರದಿಂದ ಗುಜರಾತ್ ವರೆಗಿನ ಗಡಿ ಜಿಲ್ಲೆಗಳು, ವಾಯುನೆಲೆ ಪ್ರದೇಶದಲ್ಲಿ ನಾಳೆ ಬೆಳಗ್ಗೆಯವರೆಗೂ ವಿದ್ಯುತ್ ಕಡಿತಗೊಳಿಸಲಾಗಿದೆ.